ಕಡಬ ಟೈಮ್, ಪ್ರಮುಖ ಸುದ್ದಿ: ಮನೆಯೊಂದರ ಅಂಗಳಕ್ಕೆ ಇಬ್ಬರು ಅಪರಿಚಿತರು ಬಂದಿದ್ದು ಇದನ್ನು ಗಮನಿಸಿದ ಮನೆಯಲ್ಲಿದ್ದ ಮಹಿಳೆ ಕೋವಿ ಹಿಡಿದುಕೊಂಡು ಬಂದಾಗ ಇಬ್ಬರೂ ಪರಾರಿಯಾದ ಘಟನೆ ಫೆ.5 ರಂದು ಕಡಬ ತಾಲೂಕಿನ ಬಳ್ಪ
ಗ್ರಾಮದಿಂದ ವರದಿಯಾಗಿದೆ.
ಬಳ್ಪ
ಗ್ರಾಮದ ಕುಂಜತ್ತಾಡಿ ಕೊಡಂಗುಳಿ ಸೋಮಪ್ಪ ಗೌಡ ಎಂಬವರ ಮನೆಯಲ್ಲಿ ಈ ಘಟನೆ ನಡೆದಿರುವುದಾಗಿದೆ. ಫೆ. 5 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ
ನಾಯಿ ಬೊಗಳಿದ ಶಬ್ದ ಕೇಳಿ ಮನೆಯಲ್ಲಿದ್ದ ಮಹಿಳೆ ಹೊರಗೆ ಬಂದಾಗ ಕೊಟ್ಟಿಗೆ ಸಮೀಪ ಅಪರಿಚಿತ ವ್ಯಕ್ತಿಯೊಬ್ಬ
ನಿಂತಿದ್ದ ಎನ್ನಲಾಗಿದೆ. ಆತನೊಂದಿಗೆ ವಿಚಾರಿಸಿದಾಗ ಯಾವುದೇ ಉತ್ತರ ನೀಡದ ಕಾರಣ ಮಹಿಳೆಯು ಮನೆಯೊಳಗೆ ಹೋಗಿ ಕೋವಿ ಹಿಡಿದುಕೊಂಡು ಹೊರಗೆ ಬಂದಿದ್ದಾರೆ.
ಈ
ವೇಳೆ ಸಮೀಪದಲ್ಲೇ ಮತ್ತೊಬ್ಬ ಕೂಡಾ ನಿಂತಿರುವುದು ಕಂಡು ಬಂದಿದ್ದು ಕೋವಿ ಹಿಡಿದು ಮುಂದೆ ಹೋದ ವೇಳೆ ಇಬ್ಬರೂ ಓಡಿದರೆಂದು ಜೊತೆಗೆ ಸ್ವಲ್ಪ ದೂರ
ಮಹಿಳೆ ಕೂಡಾ ಅವರನ್ನು ಓಡಿಸಿದರೆಂದು ತಿಳಿದು ಬಂದಿದೆ.
ಮನೆಗೆ
ಬಂದ ಅಪರಿಚಿತರು ಕಳ್ಳರೆಂಬ ಶಂಕೆ ವ್ಯಕ್ತವಾದ ಕಾರಣ ಸ್ಥಳೀಯರಿಗೆ ವಿಷಯ ತಿಳಿಸಿದ್ದು ಊರಿನ ಕೆಲವರು ಪರಿಸರದಲ್ಲಿ ಹುಡುಕಾಡಿದರೆಂದು ತಿಳಿದು ಬಂದಿದೆ. ಸುಬ್ರಹ್ಮಣ್ಯ ಪೊಲೀಸ್ ಠಾಣೆಗೂ ಮಾಹಿತಿ ನೀಡಲಾಗಿದ್ದು,
ಪೊಲೀಸರು ಬಂದು ಮಾಹಿತಿ ಪಡೆದು ಕೊಂಡಿದ್ದಾರೆ.
ಈ ಬಗ್ಗೆ ಕಡಬ ಟೈಮ್ ಗೆ ಪ್ರತಿಕ್ರಿಯಿಸಿರುವ ಸುಬ್ರಹ್ಮಣ್ಯ ಠಾಣಾಧಿಕಾರಿ ಕಾರ್ತಿಕ್ ಅವರು ಈ ಘಟನೆಯ ಮಾಹಿತಿ ಬಂದ ಬಳಿಕ ಸ್ಥಳಕ್ಕೆ ತೆರಳಿ ಮಾಹಿತಿ ಪಡೆಯಲಾಗಿದೆ. ಲೈಸೆನ್ಸ್ ಹೊಂದಿದ ಕೋವಿಯನ್ನು ಮಹಿಳೆ ಹಿಡಿದು ಕೊಂಡು ಬಂದಿರುವುದು ಪರಿಶೀಲನೆ ಸಮಯದಲ್ಲಿ ತಿಳಿದು ಬಂದಿದೆ. ಅಪರಿಚಿತರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದಿದ್ದಾರೆ .