34.9 C
Kadaba
Friday, March 14, 2025

ಹೊಸ ಸುದ್ದಿಗಳು

ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ :19 ನಾಮಪತ್ರ ವಾಪಸ್, 12 ಸ್ಥಾನಕ್ಕೂ ಅವಿರೋಧ ಆಯ್ಕೆ

Must read

kadabatimes.in



kadabatimes.in

ಕಡಬ ಟೈಮ್,  ನೆಲ್ಯಾಡಿ:  ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿಯ 12 ನಿರ್ದೇಶಕ ಸ್ಥಾನಕ್ಕೂ ಅವಿರೋಧ ಆಯ್ಕೆ ನಡೆದಿದೆ. ಪೈಕಿ 9 ಸ್ಥಾನಗಳಲ್ಲಿ ಸಹಕಾರ ಭಾರತಿ, 3 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾಗಿದ್ದಾರೆ.


ಸಾಲಗಾರ 5 ಸಾಮಾನ್ಯ ಸ್ಥಾನಕ್ಕೆ ಸಹಕಾರ ಭಾರತಿಯ ರವಿಚಂದ್ರ ಹೊಸವಕ್ಲು ನೆಲ್ಯಾಡಿ, ಜಿನ್ನಪ್ಪ ಗೌಡ ಮಿತ್ತಪರಾಕೆ ಕೌಕ್ರಾಡಿ, ಜನಾರ್ದನ ಗೌಡ ಬರೆಮೇಲು ಶಾಂತಿನಗರ ಗೋಳಿತ್ತೊಟ್ಟು, ಸುಧಾಕರ ಗೌಡ ಬಿ ಬಾಗಿಲುಗದ್ದೆ ಶಿರಾಡಿ ಹಾಗೂ ಕಾಂಗ್ರೆಸ್ ಬೆಂಬಲಿತ ಸರ್ವೋತ್ತಮ ಗೌಡ ಹೊಸಮನೆ ಕೌಕ್ರಾಡಿ ಆಯ್ಕೆಯಾಗಿದ್ದಾರೆ.

 

ಸಾಲಗಾರ ಮಹಿಳಾ ಮೀಸಲು 2 ಸ್ಥಾನಕ್ಕೆ ಸಹಕಾರ ಭಾರತಿಯ ಶೇಷಮ್ಮ ಪೈಸಾರಿ ಇಚ್ಲಂಪಾಡಿ, ಕಾಂಗ್ರೆಸ್ ಬೆಂಬಲಿತ ಉಷಾ ಅಂಚನ್ ಕುಂಡಡ್ಕ ನೆಲ್ಯಾಡಿ, ಸಾಲಗಾರ ಹಿಂದುಳಿದ ವರ್ಗ ಮೀಸಲು 1 ಸ್ಥಾನಕ್ಕೆ ಸಹಕಾರ ಭಾರತಿಯ ಬಾಲಕೃಷ್ಣ ಬಿ.ಬಾಣಜಾಲು ಕೌಕ್ರಾಡಿ, ಸಾಲಗಾರ ಹಿಂದುಳಿದ ವರ್ಗ ಬಿ ಮೀಸಲು 1 ಸ್ಥಾನಕ್ಕೆ ಸಹಕಾರ ಭಾರತಿಯ ಜಯಾನಂದ ಪಿ ಬಂಟ್ರಿಯಾಲ್ ಕೆಳಗಿನ ಪರಾರಿ ನೆಲ್ಯಾಡಿ, ಸಾಲಗಾರ ಅನುಸೂಚಿತ ಜಾತಿ 1 ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಹರೀಶ್ ನುಜೂಲು ಗೋಳಿತ್ತೊಟ್ಟು, ಸಾಲಗಾರ ಅನುಸೂಚಿತ ಪಂಗಡ 1 ಸ್ಥಾನಕ್ಕೆ ಸಹಕಾರ ಭಾರತಿಯ ಬಾಬು ನಾಯ್ಕ್ ಅಲಂಗಪ್ಪೆ ಆಲಂತಾಯ ಹಾಗೂ ಸಾಲಗಾರರಲ್ಲದ 1 ಸ್ಥಾನಕ್ಕೆ ಸಹಕಾರ ಭಾರತಿಯ ಭಾಸ್ಕರ ರೈ ತೋಟ ಕೊಣಾಲು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

kadabatimes.in

 

19 ನಾಮಪತ್ರ ವಾಪಸ್: ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 12 ಸ್ಥಾನಕ್ಕೆ ಒಟ್ಟು 31 ನಾಮಪತ್ರ ಸಲ್ಲಿಕೆಯಾಗಿದ್ದು ಎಲ್ಲಾ ನಾಮಪತ್ರಗಳು ಅಂಗೀಕಾರಗೊಂಡಿತ್ತು. ನಾಮಪತ್ರ ಹಿಂತೆಗೆತಕ್ಕೆ ಕೊನೆ ದಿನವಾದ ಫೆ.3ರಂದು 19 ಅಭ್ಯರ್ಥಿಗಳು ನಾಮಪತ್ರ ಹಿಂತೆಗೆದುಕೊಂಡ ಪರಿಣಾಮ 12 ಸ್ಥಾನಕ್ಕೂ ಅವಿರೋಧ ಆಯ್ಕೆ ನಡೆದಿದೆ. ಸಾಲಗಾರ ಸಾಮಾನ್ಯಕ್ಕೆ ಮೀಸಲಾಗಿದ್ದ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಧನಂಜಯ ಅಲೆಕ್ಕಿ, ಕೊರಗಪ್ಪ ಗೌಡ ಕಲ್ಲಡ್ಕ, ರವಿಪ್ರಸಾದ್ ಶೆಟ್ಟಿ ಹೊಸಮನೆ, ಇಸ್ಮಾಯಿಲ್ ಪ್ರಿಯದರ್ಶಿನಿ, ಪೂವಪ್ಪ ಪಾಲೇರಿ, ಸೆಬಾಸ್ಟಿಯನ್ ಪುಚ್ಚೇರಿ, ಸುರೇಶ್ ಬಿ ತಿರ್ಲೆ, ಪೌಲೋಸ್ ಯಂ.ಕೆ.ಪಾದಡ್ಕ, ಪ್ರಶಾಂತ ರೈ ಅರಂತಬೈಲು, ಗಿರೀಶ್ ಸಾಲಿಯಾನ್ ಬದನೆ, ವಾರಿಜಾಕ್ಷಿ ಹೊಸಮನೆ ನಾಮಪತ್ರ ಹಿಂತೆಗೆದುಕೊಂಡಿದ್ದಾರೆ. ಸಾಲಗಾರ ಮಹಿಳಾ ಮೀಸಲು ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಗೀತಾ ನೇಲ್ಯಡ್ಕ, ವಲ್ಸಮ್ಮ ಕೆ.ಟಿ.ಮೊಂಟಮೆ, ಸಾಲಗಾರ ಹಿಂದುಳಿದ ಪ್ರವರ್ಗ ಮೀಸಲು ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ವಿಶ್ವನಾಥ ಪೂಜಾರಿ ಕಲಾಯಿ, ವಿಶ್ವನಾಥ ನೆಕ್ಕರೆ, ಸಾಲಗಾರ ಹಿಂದುಳಿದ ಪ್ರವರ್ಗ ಬಿ ಮೀಸಲು ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಗಂಗಾಧರ ಶೆಟ್ಟಿ ಹೊಸಮನೆ, ಸಾಲಗಾರ ಅನುಸೂಚಿತ ಜಾತಿ ಮೀಸಲು ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಜಾನಕಿ ಬಿರ್ಮಗುಂಡಿ, ಸಾಲಗಾರ ಅನುಸೂಚಿತ ಪಂಗಡ ಮೀಸಲು ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ವಾಸಪ್ಪ ನಾಯ್ಕ್ ಗಾಂದರಿಮಜಲು ಹಾಗೂ ಸಾಲಗಾರರಲ್ಲದ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಶಿವಪ್ರಕಾಶ್ ಬೀದಿಮಜಲು ಅವರು ತಮ್ಮ ನಾಮಪತ್ರ ಹಿಂತೆಗೆದುಕೊಂಡಿದ್ದಾರೆ. ಇದರಿಂದಾಗಿ 12 ಸ್ಥಾನಕ್ಕೂ ಅವಿರೋಧ ಆಯ್ಕೆ ನಡೆದಿದೆ.

 

kadabatimes.in

ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಮಂಗಳೂರು ಉಪವಿಭಾಗ ಮಂಗಳೂರು ಇಲ್ಲಿನ ಅಧೀಕ್ಷಕರಾದ ಬಿ.ನಾಗೇಂದ್ರ ಅವರು ಚುನಾವಣಾಧಿಕಾರಿಯಾಗಿದ್ದಾರೆ. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾಕರ ರೈ ಅವರು ಸಹಕರಿಸಿದರು.