34.9 C
Kadaba
Friday, March 14, 2025

ಹೊಸ ಸುದ್ದಿಗಳು

ಕಡಬ: ಅರಣ್ಯ ಇಲಾಖೆಯ ನಿರ್ಲಕ್ಷ್ಯ : ಮರ ಉರುಳಿ ಬಿದ್ದು ಸವಾರ ಮೃತಪಟ್ಟ ಸ್ಥಳದಲ್ಲೇ ಮತ್ತೊಂದು ಅವಘಡ

Must read

 ಕಡಬ:  ಚಲಿಸುತ್ತಿದ್ದ ಬೈಕ್ ಮೇಲೆ ದೂಪದ (ಹಾಲು ಮಡ್ಡಿ) ಮರ ಬಿದ್ದು ಬೈಕ್‌ ಸವಾರ ಗಾಯಗೊಂಡ ಘಟನೆ ಕಡಬ – ಪಂಜ ರಸ್ತೆಯ ಪುಳಿಕುಕ್ಕು ಸೇತುವೆ  ಸಮೀಪ  ಮಂಗಳವಾರ ಸಾಯಂಕಾಲ ನಡೆದಿತ್ತು.

kadabatimes.in


kadabatimes.in

ಕೋಡಿಂಬಾಳ  ಗ್ರಾಮದ ಪಟ್ನ ನಿವಾಸಿ ಯಶವಂತ ಎಂಬವರು  ಗಾಯಗೊಂಡು    ಕಡಬದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಘಟನೆ ಬೆನ್ನಲ್ಲೇ ಸಾರ್ವಜನಿಕರು  ಜಮಾಯಿಸಿ  ಅರಣ್ಯ ಇಲಾಖೆಯ ವಿರುದ್ದ ಆಕ್ರೋಶ ಹೊರ ಹಾಕಿದರು.   


ಈ ವೇಳೆ‌ ಸಾರ್ವಜನಿಕರೊಂದಿಗೆ  ಮಾತನಾಡಿದ ಅರಣ್ಯ ಇಲಾಖೆಯ ಅಧಿಕಾರಿ ಸಂದ್ಯಾ ಅವರು ಎರಡು ದಿನದ ಒಳಗಾಗಿ ಅಪಾಯಕಾರಿ ಮರಗಳ ತೆರವು ಕಾರ್ಯ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಘಟನೆಯಿಂದ ಕೆಲಕಾಲ ಸಂಚಾರ‌ ವ್ಯತ್ಯಯ ಉಂಟಾಯಿತು.

kadabatimes.in


ಕಡಬ ಅರಕ್ಷಕ ಠಾಣಾ ಉಪನೀರಿಕ್ಷಕ ಅಭಿನಂದನ್   ಹಾಗು ಸಿಬ್ಬಂದಿಗಳು  ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ನಿಭಾಯಿಸಿದರು.  ಪೊಲೀಸರು,ಅರಣ್ಯ ಇಲಾಖಾ ಸಿಬ್ಬಂದಿಗಳು, ಸಾರ್ವಜನಿಕರು ಜೊತೆಯಾಗಿ ರಸ್ತೆಯಿಂದ‌ ಮರ ತೆರವುಗೊಳಿಸಿದರು.


ಕಳೆದ ಕೆಲವು ತಿಂಗಳ ಹಿಂದಷ್ಟೇ ಇದೇ ಪರಿಸರದಲ್ಲಿ ದೂಪದ ಮರವೊಂದು ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಬಿದ್ದು ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಾಸುವ ಮುನ್ನವೇ ಈ ಸ್ಥಳದ ಕೂಗಲತೆ ದೂರದಲ್ಲಿ ಮಂಗಳವಾರ ಈ ಘಟನೆ ನಡೆದಿದೆ.


kadabatimes.in

 ಕಳೆದ ಘಟನೆಯ ಸಂದರ್ಭ ಸಾರ್ವಜನಿಕರು ಪ್ರತಿಭಟನೆ   ನಡೆಸಿದ ಸಂದರ್ಭ ರಸ್ತೆ ಬದಿಯ ಅಪಾಯಕಾರಿ ಮರಗಳನ್ನು ತೆರವು ಮಾಡುವುದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು   ಭರವಸೆ ನೀಡಿದ್ದರು. ಬಳಿಕ ಕೆಲವು ಮರಗಳನ್ನು  ತೆರವು ಮಾಡಿದ್ದರು. ಅದರೆ ದಿಮ್ಮಿಗಳನ್ನು ರಸ್ತೆ ಬದಿಯಿಂದ ಇನ್ನೂ ತೆರವು ಮಾಡಿಲ್ಲ. ಮಂಗಳವಾರ ಬಿದ್ದ ಮರ ಅಪಾಯಕಾರಿಯಾಗಿದೆ ಎಂದು   ಈ ಹಿಂದೆ  ಮರ ತೆರವು ಮಾಡುವ ವೇಳೆ ಸ್ಥಳಿಯ ನಿವಾಸಿಯೋರ್ವರು ತಿಳಿಸಿದ್ದರೂ ಇದಕ್ಕೆ ಯಾವುದೆ ಸ್ಪಂದನೆ ದೊರೆತಿಲ್ಲ ಎನ್ನುವ ಅರೋಪ ಕೇಳಿಬಂದಿದೆ. ಇದೀಗ ಅದೇ ಮರ ಮುರಿದು ಬಿದ್ದಿದೆ.