34.9 C
Kadaba
Friday, March 14, 2025

ಹೊಸ ಸುದ್ದಿಗಳು

ಬಡ್ಡಮೆ ಉಸ್ತಾದ್ ಎಂದೇ ಚಿರಪರಿಚಿತರಾಗಿದ್ದ ಕೊಯಿಲ ಹಾಜಿ ಅಬ್ದುಲ್ ರಹಿಮಾನ್ ಮುಸ್ಲಿಯಾರ್ ನಿಧನ

Must read

 ಕಡಬ ಟೈಮ್ಸ್ ,  ರಾಮಕುಂಜ:  ಕೊಯಿಲ ಗ್ರಾಮದ ಬಡ್ಡಮೆ ನಿವಾಸಿ ಹಾಜಿ ಅಬ್ದುಲ್ ರಹಿಮಾನ್ ಮುಸ್ಲಿಯಾರ್ (94.) ಕೆಲ ದಿನಗಳ ಅನಾರೋಗ್ಯದಿಂದ ಫೆ.1ರಂದು ರಾತ್ರಿ ತನ್ನ ಮನೆಯಲ್ಲಿ ನಿಧನ ಹೊಂದಿದ್ದಾರೆ.

kadabatimes.in

kadabatimes.in
ಹಾಜಿ ಅಬ್ದುಲ್ ರಹಿಮಾನ್ ಮುಸ್ಲಿಯಾರ್ 


ಕೆಮ್ಮಾರ ಮಸೀದಿಯಲ್ಲಿ ದೀನೀ ಸೇವೆ ಆರಂಭಿಸಿ ಬಳಿಕ ಆತೂರು ಬದ್ರಿಯಾ ಮಸೀದಿಯ ತದ್ಬೀರುಲ್ ಇಸ್ಲಾಂ ಮದ್ರಸದಲ್ಲಿ,  ಗಂಡಿಬಾಗಿಲುನಲ್ಲಿ ಗುಡಿಸಲೊಂದನ್ನು ನಿರ್ಮಿಸಿ ಮದ್ರಸವನ್ನು ಸ್ಥಾಪಿಸಿ ಹಲವು ವರ್ಷಗಳ ಸೇವೆ ಸಲ್ಲಿಸಿದ್ದರು.  

kadabatimes.in


ಬಳಿಕ ಕೋಲ್ಪೆ, ಸರಳೀಕಟ್ಟೆಯಲ್ಲಿ ಸುಮಾರು 65 ವರ್ಷಗಳಿಗೂ  ಅಧಿಕ ಕಾಲ ಧಾರ್ಮಿಕ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಅಪಾರ ಸಂಖ್ಯೆಯಲ್ಲಿ ಶಿಷ್ಯ ವೃಂದವನ್ನು ಹೊಂದಿರುವ ಇವರು ಬಡ್ಡಮೆ ಉಸ್ತಾದ್ ಎಂದೇ ಚಿರಪರಿಚಿತರಾಗಿದ್ದರು.


kadabatimes.in

ಕೆಮ್ಮಾರ ಮಸೀದಿ ಅಧ್ಯಕ್ಷರಾಗಿ, ಅಫ್ವಾ ಫ್ಯಾಮಿಲಿ ಟ್ರಸ್ಟ್ ಇದರ ಗೌರವಾಧ್ಯಕ್ಷರಾದಿಯಾಗಿ ಹಲವಾರು ಸಂಘ ಸಂಸ್ಥೆಯಲ್ಲಿ ತೊಡಗಿಸಿಕೊಂಡಿದ್ದರು.