34.9 C
Kadaba
Friday, March 14, 2025

ಹೊಸ ಸುದ್ದಿಗಳು

ಕಡಬ :ತಾಲೂಕು ಮುಖ್ಯಶಿಕ್ಷಕರ/ಪದವಿಯೇತರ ಮುಖ್ಯಗುರುಗಳ ಸಂಘದ ನೂತನ ಸಮಿತಿ ರಚನೆ

Must read

 ಕಡಬ:
ಕಡಬ ತಾಲೂಕು ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರ(ಕೇಡರ್)ಹಾಗೂ ಪದವಿಯೇತರ ಮುಖ್ಯಗುರುಗಳ ಸಂಘದ ಹೊಸ ಸಮಿತಿಯನ್ನು ಫೆ.1ರಂದು  ಪುನರ್
ರಚಿಸಲಾಯಿತು. ಮುಖ್ಯಶಿಕ್ಷಕರ ಸಂಘದ ..ಜಿಲ್ಲಾ
ಸಮಿತಿಯ ಅಧ್ಯಕ್ಷ ನಿಂಗರಾಜು ಕೆ.ಪಿ.ಅವರ
ಮಾರ್ಗದರ್ಶನದಲ್ಲಿ ಸಮಿತಿ ರಚಿಸಲಾಗಿದೆ.

kadabatimes.in

 

kadabatimes.in


kadabatimes.in

ಅಧ್ಯಕ್ಷರಾಗಿ
ಹಳೆನೇರೆಂಕಿ ಸರಕಾರಿ ಉನ್ನತ ಹಿ.ಪ್ರಾ.ಶಾಲಾ
ಮುಖ್ಯಗುರು ವೈ.ಸಾತಪ್ಪ ಗೌಡ,
ಕಾರ್ಯದರ್ಶಿಯಾಗಿ ರಾಮಕುಂಜ ಸರಕಾರಿ ಹಿ.ಪ್ರಾ.ಶಾಲಾ
ಮುಖ್ಯಶಿಕ್ಷಕ ಮಹೇಶ್ ಎಂ.,ಹಾಗೂ ಕೋಶಾಧಿಕಾರಿಯಾಗಿ ಕಡಬ ಸರಕಾರಿ ಮಾದರಿ ಶಾಲಾ ಮುಖ್ಯಶಿಕ್ಷಕ ಆನಂದ ಅಜಿಲ ಅವರು ಆಯ್ಕೆಯಾಗಿದ್ದಾರೆ.

 

kadabatimes.in

ಉಪಾಧ್ಯಕ್ಷರಾಗಿ
ಸಬಳೂರು ಸರಕಾರಿ ಶಾಲಾ ಮುಖ್ಯಶಿಕ್ಷಕಿ ವಾರಿಜಾ ಬಿ., ಬಿಳಿನೆಲೆ ಶಾಲಾ ಮುಖ್ಯಶಿಕ್ಷಕಿ ಶಾರದಾ ಜಿ., ಜೊತೆ ಕಾರ್ಯದರ್ಶಿಯಾಗಿ ಗೋಳಿತ್ತಟ್ಟು ಶಾಲಾ ಮುಖ್ಯಶಿಕ್ಷಕಿ ಜಯಂತಿ ಬಿ.ಎಂ., ಚಾರ್ವಾಕ
ಶಾಲಾ ಮುಖ್ಯಶಿಕ್ಷಕ ರಮೇಶ್ ಎಸ್., ಸಂಘಟನಾ ಕಾರ್ಯದರ್ಶಿಯಾಗಿ ಕುಂತೂರುಪದವು ಸರಕಾರಿ ಹಿ.ಪ್ರಾ.ಶಾಲಾ
ಮುಖ್ಯಶಿಕ್ಷಕಿ ಗಿರಿಜ ವಿ., ಕೊಂಬಾರು ಶಾಲಾ ಮುಖ್ಯಶಿಕ್ಷಕಿ ವೀಣಾಕುಮಾರಿ ಆಯ್ಕೆಗೊಂಡಿದ್ದಾರೆ. ಗೌರವಾಧ್ಯಕ್ಷರಾಗಿ ಸವಣೂರು ಶಾಲಾ ಮುಖ್ಯಶಿಕ್ಷಕ ನಿಂಗರಾಜು ಕೆ.ಪಿ., ಗೌರವ
ಸಲಹೆಗಾರರಾಗಿ ನಾಣಿಲ ಶಾಲೆ ಮುಖ್ಯಶಿಕ್ಷಕ ಪದ್ಮಯ್ಯ ಗೌಡ, ಬೊಬ್ಬೆಕೇರಿ ಶಾಲಾ ಮುಖ್ಯಶಿಕ್ಷಕಿ ಶಶಿಕಲಾ ಹಾಗೂ ಸಹ ಕಾರ್ಯದರ್ಶಿಯಾಗಿ ಕಡ್ಯ
ಕೊಣಾಜೆ ಶಾಲಾ ಮುಖ್ಯಶಿಕ್ಷಕ ರಾಮಕೃಷ್ಣ ಆಯ್ಕೆಗೊಂಡಿದ್ದಾರೆ.