24.5 C
Kadaba
Monday, March 17, 2025

ಹೊಸ ಸುದ್ದಿಗಳು

ನಮ್ಮ ಕಡಬಕ್ಕೆ ಹೆಮ್ಮೆ :PLD ಬ್ಯಾಂಕ್ ನಿರ್ದೇಶಕಿಯಾಗಿ ಆಯ್ಕೆಯಾದ ಕಾಲೇಜು ವಿದ್ಯಾರ್ಥಿನಿ

Must read

ಕಡಬ ಟೈಮ್, ಪ್ರಮುಖ ಸುದ್ದಿ:   ಪುತ್ತೂರು  ಭೂ
ಅಭಿವೃದ್ಧಿ ಬ್ಯಾಂಕ್ ಇತಿಹಾಸದಲ್ಲಿಯೇ ಮೊದಲ
ಬಾರಿಗೆ ಕಾಲೇಜಿನ ವಿದ್ಯಾರ್ಥಿನಿಯೊಬ್ಬರು ಬ್ಯಾಂಕ್ ನಿರ್ದೇಶಕಿಯಾಗಿ ಆಯ್ಕೆಯಾಗಿದ್ದಾರೆ.

kadabatimes.in


kadabatimes.in

ಕಡಬ ವಲಯದ ಮಹಿಳಾ ಮೀಸಲು ಕ್ಷೇತ್ರದಿಂದ ಸಹಕಾರಭಾರತಿ ಅಡಿಯಲ್ಲಿ ಸ್ಪರ್ಧಿಸಿ ಅವಿರೋಧವಾಗಿ ಆಯ್ಕೆಯಾಗಿರುವ ಸ್ವಾತಿ ರೈ ಆರ್ತಿಲ ಕಾಲೇಜು ವಿದ್ಯಾರ್ಥಿನಿಯಾಗಿದ್ದಾರೆ.  ಈ ಮೂಲಕ  ಸಹಕಾರಿ ಬ್ಯಾಂಕಿನ ಮೆಟ್ಟಲು ಏರಿದ ಮೊದಲ ಕಾಲೇಜು ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ನಿರ್ದೇಶಕಿಯಾಗಿ ಆಯ್ಕೆಯಾಗಿರುವ ಸ್ವಾತಿ ರೈ ಆರ್ತಿಲ (ಕಡಬ ಟೈಮ್)


ತನ್ನ ತಾಯಿಗೆ ಬಂದಿದ್ದ ಅವಕಾಶವನ್ನು  ಕುಟುಂಬಸ್ಥರ  ಸಲಹೆಯಂತೆ  ಸ್ಪರ್ಧಿಸಿಸಲು ಈಕೆ ಇಚ್ಚಿಸಿದ್ದರು. ಇದೀಗ  ಕೃಷಿಕರ ಪರವಾಗಿರುವ ಸಹಕಾರಿ ಸಂಸ್ಥೆಯೊಂದರ ನಿರ್ದೇಶಕಿ ಆಗಿ
ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದಾರೆ .ಈಕೆ ಕಡಬ
ತಾಲೂಕಿನ
ಆರ್ತಿಲ ದಿ.ಆನಂದ ರೈ
ಮತ್ತು ತಾರಾ ರೈ ಅವರ ಪುತ್ರಿ

kadabatimes.in


ಕಾಲೇಜು ಓದಿನ ನಡುವೆ ಸಮಸ್ಯೆಯಾಗಬಹುದೆಂದು ಅಂದುಕೊಂಡಿದ್ದೆ. ಬಂದ ಅವಕಾಶವನ್ನು ಬಳಸಿಕೊಂಡಿದ್ದೇನೆ. ತಿಂಗಳಿಗೆ ಒಮ್ಮೆ
ಮೀಟಿಂಗ್ ಇರುವ ಕಾರಣ ಕಲಿಕಾ ಚಟುವಟಿಕೆಗೆ ಅಡೆತಡೆಯಾಗದು
. ಈ ಮೂಲಕ ರೈತರಿಗೆ ಸಹಾಯ
ಮಾಡುವ ಅವಕಾಶ ಸಿಕ್ಕಿದಕ್ಕೆ ಸಂತೋಷವಾಗಿದೆ-  ಸ್ವಾತಿ
ರೈ ಆರ್ತಿಲ

kadabatimes.in