33.3 C
Kadaba
Saturday, March 15, 2025

ಹೊಸ ಸುದ್ದಿಗಳು

ಪ್ರಿ ವೆಡ್ಡಿಂಗ್ ಶೂಟಿಂಗ್ ಮುಗಿಸಿ ತೆರಳುತ್ತಿದ್ದರ ಕಾರು ಅಪಘಾತ: ಭಾವಿ ವಧುವರ ಸಹಿತ ನಾಲ್ವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲು

Must read

ಕಡಬ
ಟೈಮ್, ನೆಲ್ಯಾಡಿ:
 ವಿವಾಹಪೂರ್ವ ಶೂಟಿಂಗ್ ನಡೆಸಲೆಂದು
ಬೆಂಗಳೂರಿನಿಂದ ಉಡುಪಿಗೆ ಪ್ರಯಾಣಿಸುತ್ತಿದ್ದ ತಂಡವಿದ್ದ ಕಾರೊಂದು ನೆಲ್ಯಾಡಿಯ ಕೋಣಾಲು ಬಳಿ ಅಪಘಾತಕ್ಕೀಡಾಗಿ
ಭಾವಿ ವಧುವರರ ಸಹಿತ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ವರದಿಯಾಗಿದೆ.

kadabatimes.in


kadabatimes.in

ಬೆಂಗಳೂರಿನ
ನೆಲಮಂಗಲದ ನಿವಾಸಿಗರಾದ ವಿವಾಹ ನಿಶ್ಚಿತಾರ್ಥವಾಗಿದ್ದ ಭಾವಿ ವರ ಹಾಗೂ ಭಾವಿ ವಧು , ಮತ್ತಾಕೆಯ ಬ್ಯೂಟೀಷಿಯನ್
ಹಾಗೂ ಕಾರು ಚಾಲಕರ ತಂಡ ಬೆಂಗಳೂರಿನಿಂದ ಕಾರಿನಲ್ಲಿ ಪ್ರಯಾಣಿಸಿ ಮೇಲುಕೋಟೆಯಲ್ಲಿ ಶ್ಯೂಟಿಂಗ್ ಮುಗಿಸಿದ್ದರು.


kadabatimes.in

ನಂತರ
ಉಡುಪಿಯತ್ತ ಪ್ರಯಾಣಿಸುತ್ತಿದ್ದಾಗ ಬೆಂಗಳೂರು-ಮಂಗಳೂರು ಹೆದ್ದಾರಿಯ  ಕಡಬ ತಾಲೂಕು ಕೋಣಾಲು ಗ್ರಾಮದ ಕರ್ಬ ಸಂಕ ಎಂಬಲ್ಲಿ ರಾತ್ರಿ
ವೇಳೆ ಅಪಘಾತಕ್ಕೀಡಾಗಿತ್ತು. ಇದರಿಂದ ಕಾರಿನಲ್ಲಿದ್ದ ನಾಲ್ವರಿಗೂ ಗಂಬೀರ ಸ್ವರೂಪದ ಗಾಯಗಳಾಗಿದೆ.


kadabatimes.in


ತಂಡದ ಶ್ಯೂಟಿಂಗ್ ಸಿಬ್ಬಂದಿಗಳು ಬೇರೊಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದು, ಅಪಘಾತಕ್ಕೀಡಾಗಿರುವುದನ್ನು ಕಂಡು ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾದರು. ಅಪಘಾತದಿಂದ ಭಾವಿ ವಧುವರರ ಕಾಲಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಉಪ್ಪಿನಂಗಡಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.