27.1 C
Kadaba
Saturday, March 15, 2025

ಹೊಸ ಸುದ್ದಿಗಳು

ದಿ. ಜಯರಾಮ ಆರ್ತಿಲ ಸ್ಮರಣಾರ್ಥ ಜೆಸಿಐ ಕಡಬ ಕದಂಬ ವತಿಯಿಂದ ರಕ್ತದಾನ ಶಿಬಿರ

Must read

ಕಡಬ ಟೈಮ್, ಪಟ್ಟಣ ಸುದ್ದಿ:  ಜೆಸಿಐ ಕಡಬ ಕದಂಬ ಇದರ ಆಶ್ರಯದಲ್ಲಿ ಜೆಸಿಐನ ಪೂವಾಧ್ಯಕ್ಷ ದಿ.ಜಯರಾಮ ಆರ್ತಿಲ ಅವರ ನಾಲ್ಕನೇ ವರ್ಷದ ಪುಣ್ಯ ಸ್ಮರಣೆ ಪ್ರಯುಕ್ತ ರಕ್ತದಾನ ಶಿಬಿರ ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬುಧವಾರ ನಡೆಯಿತು. 

kadabatimes.in

  ಜೆಸಿಐ ಕಡಬ ಕದಂಬ ಚಾರಿಟೆಬಲ್ ಟ್ರಸ್ಟ್ , ಮಂಗಳೂರಿನ ಭಾರತೀಯ ರೆಡ್ ಕ್ರಾಸ್ ಸೊಸೈಟಿ ರಕ್ತನಿಧಿ ಶಾಖೆ, ಸರಕಾರಿ ಲೇಡಿಗೋಶನ್ ಆಸ್ಪತ್ರೆ ಇವುಗಳು ಸಹಯೋಗ ನೀಡಿದ್ದವು. 
ವೈದ್ಯಾಧಿಕಾರಿ ಡಾ.ತ್ರಿಮೂರ್ತಿ ಶಿಬಿರ ಉದ್ಘಾಟಿಸುತ್ತಿರುವುದು



 ಕಡಬ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ತ್ರಿಮೂರ್ತಿ ಶಿಬಿರ ಉದ್ಘಾಟಿಸಿ ಮಾತನಾಡಿ, ಆರೋಗ್ಯವಂತ ಮನುಷ್ಯ ರಕ್ತದಾನ ಮಾಡುವುದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ, ನಾವು ನೀಡಿದ ರಕ್ತ ನಮ್ಮ ದೇಹದಲ್ಲಿ ಶೀಘ್ರದಲ್ಲಿ ಮರು ಸಂಗ್ರ್ರಹಣೆಯಗುತ್ತದೆ. ಇವತ್ತು ವಿದ್ಯಾವಂತರಲ್ಲೂ ರಕ್ತದಾನ ಮಾಡುವುದರ ಬಗ್ಗೆ ತಪ್ಪು ತಿಳುವಳಿಕೆ ಇದೆ, ಈ ಸಂದೇಹಗಳನ್ನು ನಿವಾರಿಸುವಲ್ಲಿ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ, ಯುವ ಜನತೆ ರಕ್ತದಾನ ಮಾಡಲು ಮುಂದೆ ಬರಬೇಕಿದೆ ಎಂದರು. 

 ಮಂಗಳೂರಿನ ಭಾರತೀಯ ರೆಡ್ಕ್ರಾಸ್ ಸೊಸೈಟಿ ರಕ್ತನಿಧಿಯ ಸಂಯೋಜಕ ಪ್ರವೀಣ್ ಕುಮಾರ್ ಅತಿಥಿಯಾಗಿ ಮಾತನಾಡಿ, ಜಿಲ್ಲೆಯಲ್ಲಿ ರಕ್ತದ ಅಭಾವ ಕಾಡುತ್ತಿದೆ, ನಾವು ರಕ್ತದಾನ ಮಾಡುವುದರೊಂದಿಗೆ ಇನ್ನೊಬ್ಬರು ರಕ್ತದಾನ ಮಾಡಲು ಪ್ರೇರಣೆ ನೀಡಬೇಕು, ಸಮಾಜದ ಯಾರೂ ಕೂಡಾ ರಕ್ತದ ಕೊರೆತಯಿಂದ ಸಾಯಬಾರದು, ಅದು ನಮ್ಮ ಕಟ್ಟಕಡೆಯ ನಿರ್ಧಾರ ಆಗಬೇಕು, ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು, ಯುವ ಜನತೆ ಮುತುವರ್ಜಿವಹಿಸಬೇಕು ಎಂದರು. 

 ಜೆಸಿಐ ಕಡಬ ಕದಂಬ ಇದರ ಅಧ್ಯಕ್ಷೆ ವಿಶ್ರುತಾ ರಾಜೇಶ್ ಅಧ್ಯಕ್ಷತೆ ವಹಿಸಿದ್ದರು.
ಜೆಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ನಾಗರಾಜ್ ಎನ್.ಕೆ., ಜೆಸಿಐ ವಲಯ ನಿರ್ದೇಶಕ ಕಾಶಿನಾಥ್ ಗೋಗಟೆ, ಪೂವಾಧ್ಯಕ್ಷ ಝಾಫಿರ್ ಮಹಮ್ಮದ್, ನಿರ್ದೆಶಕ ಪ್ರೇಮ್ಜಿತ್ ಮಾರ್ಟಸ್ , ಗೀತಾ ಜಯರಾಮ ಆರ್ತಿಲ ಉಪಸ್ಥಿತರಿದ್ದರು. ಜೆಸಿಐ ಕಡಬ ಕದಂಬದ ಪೂರ್ವಾಧ್ಯಕ್ಷ ಅಭಿಷೇಕ್, ಕಾರ್ಯದರ್ಶಿ ನವ್ಯ ಶ್ರೀಕೃಷ್ಣ ಮಾಣಿಪ್ಪಾಡಿ ಸಹಕರಿಸಿದರು.

kadabatimes.in
kadabatimes.in
kadabatimes.in