25.2 C
Kadaba
Saturday, March 15, 2025

ಹೊಸ ಸುದ್ದಿಗಳು

ಕಡಬ ಸಹಿತ ಜಿಲ್ಲೆಯ ವಿವಿಧ ಸರಕಾರಿ ಆಸ್ಪತ್ರೆಗಳಿಗೆ ವೈದ್ಯರ ನೇಮಕಾತಿಗೆ ಅರ್ಜಿ ಆಹ್ವಾನ

Must read

ಕಡಬ
ಟೈಮ್ಸ್,ದಕ್ಷಿಣ ಕನ್ನಡ:
ಎನ್
ಹೆಚ್ಎಂ ಕಾರ್ಯಕ್ರಮದಡಿ ಗುತ್ತಿಗೆ
ಆಧಾರದ ಮೇಲೆ ಜಿಲ್ಲೆಯ ಪುತ್ತೂರು, ಕಡಬ, ಉಪ್ಪಿನಂಗಡಿ, ವಿಟ್ಲ, ಕೊಕ್ಕಡ ಸಹಿತ ವಿವಿಧ ಸರಕಾರಿ ಆಸ್ಪತ್ರೆಗಳಿಗೆ ವೈದ್ಯರು ಮತ್ತು ಶುಶ್ರೂಷಕಿಯರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ

kadabatimes.in


kadabatimes.in

ರಾಷ್ಟ್ರೀಯ
ಆರೋಗ್ಯ ಅಭಿಯಾನ ಕಾರ್ಯಕ್ರಮದಡಿ ಒಂದು ವರ್ಷದ ಅವಧಿಗೆ ಜಿಲ್ಲೆಯ ವಿವಿಧ ಸರಕಾರಿ ಆಸ್ಪತ್ರೆಗಳಿಗೆ ವೈದ್ಯರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.


kadabatimes.in

ದ.ಕ.ಜಿಲ್ಲೆಯ ವೆನ್ಲಾಕ್
ಆಸ್ಪತ್ರೆಯ ಡಿಇಐಸಿ ಘಟಕದ ಮಕ್ಕಳ ತಜ್ಞರ ಹುದ್ದೆ, ಸರಕಾರಿ ಲೇಡಿಗೋಶನ್ ಆಸ್ಪತ್ರೆಯ obstetric
ICU/HDU ಘಟಕದ ಅರವಳಿಕೆ ತಜ್ಞರ ಹುದ್ದೆ, ಬಂಟ್ವಾಳ ಮತ್ತು ಸುಳ್ಯ ತಾಲೂಕು ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಮೂಡಬಿದ್ರೆ, ಮುಲ್ಕಿ, ವಿಟ್ಲ, ಕಡಬ ಹಾಗೂ ಉಳ್ಳಾಲದ ನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಹುದ್ದೆ, ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅರವಳಿಕೆ ತಜ್ಞರ ಹುದ್ದೆ, ಸಮುದಾಯ ಆರೋಗ್ಯ ಕೇಂದ್ರ ವಿಟ್ಲ, ಕಡಬ ಮತ್ತು ಕೊಕ್ಕಡದಲ್ಲಿ ಮಕ್ಕಳ ತಜ್ಞರ ಹುದ್ದೆ, ಉಳ್ಳಾಲ ನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪಿಷಿಶಿಯನ್ ಹುದ್ದೆ, ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆ ಬಂಟ್ವಾಳ, ಪುತ್ತೂರು ಮತ್ತು ಸುಳ್ಯದಲ್ಲಿ ICU/HDU ಘಟಕದ ವೈದ್ಯಾಧಿಕಾರಿಗಳ ಹುದ್ದೆಗೆ, ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಟೆಲಿಮೆಡಿಸಿನ್ ಘಟಕದ ವೈದ್ಯಾಧಿಕಾರಿ ಹುದ್ದೆಗೆ, ಸರಕಾರಿ ಲೇಡಿಗೋಶನ್ ಆಸ್ಪತ್ರೆಯ Obstetric
ICU/HDU ಘಟಕದ ವೈದ್ಯಾಧಿಕಾರಿಗಳ ಹುದ್ದೆಗೆ, ಎನ್‌ಹೆಚ್‌ಎಂ-ಎನ್‌ಬಿಡಿಸಿಪಿ
ಕಾರ್ಯಕ್ರಮದಡಿ
Consultant Entomologist ಹುದ್ದೆಗೆ,
ಜಿಲ್ಲಾ ವೆನ್ಲಾಕ್ ಆಸ್ಪತ್ರೆ, ಸರಕಾರಿ ಲೇಡಿಗೋಶನ್ ಆಸ್ಪತ್ರೆ, ತಾಲೂಕು ಆಸ್ಪತ್ರೆ ಬಂಟ್ವಾಳ, ನಗರ ಸಮುದಾಯ ಆರೋಗ್ಯ ಕೇಂದ್ರ ಉಳ್ಳಾಲಕ್ಕೆ ಶುಶ್ರೂಷಕಿಯರ ಹುದ್ದೆಗೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಕಸಬಾ ಬೆಂಗ್ರೆಗೆ ಶುಶ್ರೂಷಕಿ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.


kadabatimes.in

PM-ABHIM ಕಾರ್ಯಕ್ರಮದಡಿ ನಮ್ಮ
ಕ್ಲಿನಿಕ್, ಪೋರ್ಟ್ (ಹೊಯ್ಗೆ ಬಜಾರ್)ಗೆ ವೈದ್ಯಾಧಿಕಾರಿ ಹುದ್ದೆಗೆ
ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಇಲಾಖಾ ವೆಬ್‌ಸೈಟ್ www.dkhfw.in ನಿಂದ ಪಡೆದು ಅರ್ಜಿಯಲ್ಲಿ ತಿಳಿಸಿರುವ ಅಗತ್ಯ ದಾಖಲೆಗಳನ್ನು ದ.ಕ. ಜಿಲ್ಲಾ
ಯೋಜನಾ ನಿರ್ವಹಣಾ ಘಟಕಕ್ಕೆ ಜ.28ರೊಳಗೆ ಸಲ್ಲಿಸಬೇಕು.ಹೆಚ್ಚಿನ ಮಾಹಿತಿಗೆ ದೂ.ಸಂ:0824-2424501ನ್ನು
ಸಂಪರ್ಕಿಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಸದಸ್ಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.