ಕಡಬ ಟೈಮ್ಸ್, ಬೆಳ್ಳಾರೆ:
ಅಡಿಕೆ ವ್ಯಾಪಾರಿಯೋರ್ವರಿಂದ ಲಕ್ಷಾಂತರ ಮೌಲ್ಯದ ಒಣ ಅಡಿಕೆ ಪಡೆದು
ಪೂರ್ತಿ ಹಣ ಪಾವತಿಸದೇ ವಂಚನೆ
ಮಾಡಿದ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




ಬೆಳ್ಳಾರೆಯಲ್ಲಿ
ಅಡಿಕೆ ವ್ಯವಹಾರ ನಡೆಸುತ್ತಿರುವ ಪುತ್ತೂರಿನ ವ್ಯಕ್ತಿಯೋರ್ವರು ಠಾಣೆಗೆ ದೂರು ನೀಡಿದ್ದಾರೆ


ಗುಜರಾತ್‌ನ ಹಿದಾಯ ಮಧುಬಾಯಿ
(46) ಬೆಳ್ಳಾರೆಯ ಅಡಿಕೆ ವ್ಯಾಪಾರಿಗೆ ಕರೆ ಮಾಡಿ ಅಡಿಕೆ ಖರೀದಿಸುವುದಾಗಿ ತಿಳಿಸಿ ದರ ನಿಗದಿ ಮಾಡಿದ್ದು,
ಅದರಂತೆ ವ್ಯಾಪಾರಿ ಗುಜರಾತ್‌ಗೆ 2024ರ ಡಿ.5ರಂದು
ಒಟ್ಟು 1,040 ಕೆ.ಜಿ. ಒಣ
ಅಡಿಕೆ ಕಳುಹಿಸಿದ್ದು, ಅದರ ಮೌಲ್ಯ 3.05 ಲಕ್ಷ ರೂ. ಅನ್ನು ವ್ಯಾಪಾರಿಯ
ಬ್ಯಾಂಕ್ ಖಾತೆಗೆ ಹಾಕಿದ್ದಾರೆ.
ಎರಡನೇ
ಬಾರಿಗೆ ವ್ಯಾಪಾರಿ 2,730 ಕೆ.ಜಿ. ಒಣ
ಅಡಿಕೆಯನ್ನು 2024ರ ಡಿ. 17ರಂದು
ಕಳುಹಿಸಿಕೊಟ್ಟಿದ್ದು, ಅದರ ಒಟ್ಟು ಮೌಲ್ಯ 8,02,620 ರೂ. ಆಗಿದ್ದು, ಅದರಲ್ಲಿ 2,03,840 ರೂ. ಅನ್ನು ಬ್ಯಾಂಕ್ ಖಾತೆಗೆ ಹಾಕಿದ್ದು, ಉಳಿದ 5,98,780 ರೂ. ಅನ್ನು ಬಾಕಿ ಇರಿಸಿಕೊಂಡಿದ್ದು, ಪಾವತಿಸುವಂತೆ ತಿಳಿಸಿದ್ದರೂ, ಗುಜರಾತ್‌ನ ವ್ಯಾಪಾರಿ ಹಣ
ಪಾವತಿಸಿದೇ ವಂಚಿಸಿದ್ದಾಗಿ ಆರೋಪಿಸಲಾಗಿದೆ. ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

