ಕಡಬ ಟೈಮ್,ಪಟ್ಟಣ ಸುದ್ದಿ: ಸಮಾಜಮುಖಿ ಸಂಘಟನಾತ್ಮಕ ಕಾರ್ಯಕ್ರಮಗಳ ಮೂಲಕ ಕಳೆದ ಏಳು ವರ್ಷಗಳಿಂದ ಸಕ್ರಿಯಾಗಿ, ಸಮುದಾಯದ ಧ್ವನಿಯಾಗಿ ಗುರುತಿಸಿಕೊಂಡಿರುವ ಯೂತ್ ಕ್ಲಬ್ ದೊಡ್ಡ ಕೊಪ್ಪ ಇದರ ನೂತನ ಪದಾಧಿಕಾರಿಗಳ ಆಯ್ಕೆಯು ಇತ್ತೀಚೆಗೆ ನಡೆದಿದೆ.




ನೂತನ ಸಮಿತಿಯ ಅದ್ಯಕ್ಷರಾಗಿ ಶ್ರೀಕಾಂತ್
ಕಜ್ಜೋಡಿ, ಉಪಾಧ್ಯಕ್ಷರಾಗಿ ಬಾಲಚಂದ್ರ ಕುಕ್ಕನ್ನ ಮನೆ, ಕಾರ್ಯದರ್ಶಿಯಾಗಿ ಸಂತೋಷ ಪಿ ಪಟ್ನ , ಜತೆ ಕಾರ್ಯದರ್ಶಿಯಾಗಿ ಹರ್ಷಿತ್ ಆಲಾಡಿ , ಕೋಶಾಧಿಕಾರಿಯಾಗಿಪ್ರದೀಪ್ ಜಾನಮನೆ ಅವರನ್ನು ಸರ್ವಾನುಮತದಿಂದ
ಆಯ್ಕೆ ಮಾಡಲಾಯಿತು.
![]() ![]() |
ಆಯ್ಕೆಯಾದ ನೂತನ ಪದಾಧಿಕಾರಿಗಳು(KADABA TIMES) |


ಕಳೆದ ಕೆಲವು ವರ್ಷಗಳಿಂದ ಕುಂಬಾರ ಸಮುದಾಯದ ಸಂಸ್ಕೃತಿ, ಇತಿಹಾಸ, ಬೆಳವಣಿಗೆ ಹೀಗೆ ಸಮುದಾಯದ ಮಹೋನ್ನತ ಅಂಶಗಳನ್ನು ಗಮನದಲ್ಲಿ ಇರಿಸಿಕೊಂಡು ಸಮಾಜದ ಕೊಂಡಿಯಾಗಿ ಕೆಲಸ ನಿರ್ವಹಿಸುವಲ್ಲಿ ಈ ತಂಡವು ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ.


ಸುಮಾರು 80 ಸಕ್ರಿಯ ಸದಸ್ಯರನ್ನು ಒಳಗೊಂಡ ಈ ತಂಡವು ಯುವ ಸಮುದಾಯವನ್ನು ಒಗ್ಗೂಡಿಸಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ.