![]() ![]() |
ಲೋಕೋಪಯೋಗಿ ಇಲಾಖೆಯ ನಿವೇಶನದಲ್ಲಿ ದಾಸ್ತಾನು ಮಾಡಿರುವ ಮರಳು(KADABA TIMES) |




ಕುಕ್ಕೆ ಸುಬ್ರಹ್ಮಣ್ಯ: ಕುಮಾರಧಾರ ನದಿಯಿಂದ ದೇವರ ಹೆಸರಿನಲ್ಲಿ ನಡೆಯುತ್ತಿದ್ದ
ಅಕ್ರಮ ಮರಳುಗಾರಿಕೆಗೆ ಅಧಿಕಾರಿಗಳು ಬ್ರೇಕ್ ಹಾಕಿದ್ದಾರೆ.
ಸುಬ್ರಹ್ಮಣ್ಯದ ಕುಮಾರಧಾರ ವ್ಯಾಪ್ತಿಯು ಪರಿಸರ
ಸೂಕ್ಷ್ಮ ವಲಯ ಎಂದು ಸರ್ಕಾರ ಘೋಷಿಸಿರುವ ಹಿನ್ನೆಲೆ
ಮರಳು ಗಣಿಗಾರಿಕೆಗೆ
ಅವಕಾಶವಿಲ್ಲ,ಆದ್ರೆ ಪ್ರತೀ
ವರ್ಷ ನಡೆಯುವ ಸುಬ್ರಹ್ಮಣ್ಯ ಷಷ್ಠಿ
ಮಹೋತ್ಸವದ ಮರುದಿನ ಕುಮಾರಧಾರ
ನದಿಯಲ್ಲಿ ದೇವರ ಅವಭೃತೋತ್ಸವ ಹಾಗೂ ನೌಕಾವಿಹಾರ ನಡೆಯುವ ಕಾರಣ ಜಳಕದ ಗುಂಡಿಯ ಮರಳು ಮತ್ತು ಹೂಳನ್ನು ತೆರವುಗೊಳಿಸಬೇಕಾಗುತ್ತದೆ.


ಇದನ್ನೇ ದುರುಪಯೋಗಿಸಿಕೊಂಡು ಉಚಿತವಾಗಿ
ದೊರೆಯುತ್ತಿದ್ದ ಮರಳನ್ನು ಕೆಲ ಅಕ್ರಮ ಮರಳು ದಂಧೆಕೋರರು ದುಬಾರಿ ದರದಲ್ಲಿ ಮಾರಾಟ ಮಾಡುತ್ತಿದ್ದರು. ಹೀಗಾಗಿ ಸಾರ್ವಜನಿಕರಲ್ಲಿ
ಈ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು. ಆದರೆ
ಈ ವರ್ಷ ಈ ದಂಧೆಗೆ ಸಂಪೂರ್ಣ
ಕಡಿವಾಣ ಬಿದ್ದಿದೆ.
ಜಳಕದ ಗುಂಡಿಯ ಮರಳು ತೆಗೆಯುವ ಜವಾಬ್ದಾರಿಯನ್ನು ಸುಬ್ರಹ್ಮಣ್ಯ ಲೋಕೋಪಯೋಗಿ ಇಲಾಖೆಗೆ ವಹಿಸಿದ ಪುತ್ತೂರು ಸಹಾಯಕ ಆಯುಕ್ತರು ಈ ಮೂಲಕ ಯಶಸ್ವಿಯಾಗಿ
ನಿರ್ವಹಿಸಿದ್ದಾರೆ.
ಮಾರುಕಟ್ಟೆಯ
ಮೌಲ್ಯ ಪ್ರಕಾರ ಸುಮಾರು 20 ಲಕ್ಷಕ್ಕೂ ಮಿಕ್ಕಿ ಬೆಲೆಬಾಳುವ ನೂರಾರು ಲೋಡು ಮರಳು ಸುಬ್ರಹ್ಮಣ್ಯ ಕುಲ್ಕುಂದ ದಲ್ಲಿರುವ ಲೋಕೋಪಯೋಗಿ ಇಲಾಖೆಯ ನಿವೇಶನದಲ್ಲಿ ದಾಸ್ತಾನು ಮಾಡಲಾಗಿದೆ.
ಮುಂದಿನ ದಿನಗಳಲ್ಲಿ ಇಲಾಖಾ ಮುಖಾಂತರ ಹರಾಜು ನಡೆದು ಯೋಗ್ಯ ಬೆಲೆಗೆ ಮರಳು ದೊರೆಯುವ ಸಾಧ್ಯತೆಯ ನಿರೀಕ್ಷೆಯಲ್ಲಿ ಸಾರ್ವಜನಿಕರು ಇದ್ದಾರೆ.

