

![]() ![]() |
ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ವ್ಯಾಪ್ತಿಯಲ್ಲಿ ಕಂದಕ ನಿರ್ಮಿಸಿರುವುದು |


ಕಡಬ: ಇಲ್ಲಿನ ಠಾಣಾ ವ್ಯಾಪ್ತಿಯ ಐತ್ತೂರು ಗ್ರಾಮದ ಮಾಯಿಪಾಜೆ ಎಂಬಲ್ಲಿನ ಕುಮಾರಧಾರ ನದಿಯಿಂದ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಸ್ಥಳಕ್ಕೆ ಇತ್ತೀಚೆಗೆ ( ಅ.26 ಶನಿವಾರ) ಪೊಲೀಸರು
ದಾಳಿ ಮಾಡಿ ಮರಳು ತುಂಬಿದ ಪಿಕಪ್ ವಾಹನ
ವಶಕ್ಕೆ ಪಡೆದಿದ್ದರು.
ಪಿಕಪ್ ವಾಹನ
(KA12A2015) ನೆಕ್ಕಿಲಾಡಿ
ಗ್ರಾಮದ ಮಾಯಿಪಾಜೆ ವ್ಯಕ್ತಿಯೊಬ್ಬರಿಗೆ
ಸೇರಿದ ವಾಹನ ಇದಾಗಿತ್ತು. ಈ ವ್ಯಕ್ತಿ ಮರ್ದಾಳ ಗ್ರಾ.ಪಂ ಸದಸ್ಯನಾಗಿರುವುದು ಪೊಲೀಸರ ಪರಿಶೀಲನೆ ವೇಳೆ ಗೊತ್ತಾಗಿತ್ತು .ಇದೀಗ
ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಸ್ಥಳದಲ್ಲಿ ಅಧಿಕಾರಿಗಳು ಕಂದಕ ನಿರ್ಮಿಸಲು ಮುಂದಾಗಿದ್ದಾರೆ.
ಜೆಸಿಬಿ ಬಳಸಿ ಸದ್ಯ ಸಣ್ಣ ರೂಪದ ಕಂದಕ ನಿರ್ಮಿಸಿದ್ದಾರೆ.


ಈ ಮೂಲಕ ಕಳೆದ ಐದು ವರ್ಷಗಳಿಂದ ರಬ್ಬರ್
ನಿಗಮಕ್ಕೆ ಸೇರಿದ ( KFDC ) ಜಾಗದ
ಮೂಲಕ ರಾಜಕೀಯ ಮತ್ತು ಕೆಲ ಅಧಿಕಾರಿಗಳ ಶ್ರೀ
ರಕ್ಷೆಯಿಂದಲೇ ಅನಧಿಕೃತ ರಸ್ತೆ ನಿರ್ಮಿಸಿ ಕುಮಾರಧಾರ
ನದಿಯಿಂದ ಹಗಲು ರಾತ್ರಿ ಎನ್ನದೆ ನಿರಂತರ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ದಂಧೆಗೆ ಬ್ರೇಕ್ ಬಿದ್ದಂತಾಗಿದೆ.


ಸದ್ಯ ಮರಳು ಸಹಿತ ವಾಹನವನ್ನು ಪೊಲೀಸರು ವಶಕ್ಕೆ
ಪಡೆದು ಗಣಿ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ. ಮಾಹಿತಿ ಪ್ರಕಾರ ಇನ್ನೂ ವಾಹನ ಬಿಡುಗಡೆಯಾಗಿಲ್ಲ. ಇದೇ ವ್ಯಾಪ್ತಿಯ
ಓಟೆಕಜೆ, ಕೊರಿಯರ್ ಪ್ರದೇಶದಲ್ಲೂ ಮರಳು ಕಳ್ಳತನ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು. ಆದರೆ ಓಟೆಕಜೆಯಲ್ಲಿ
ಯಾವುದೇ ಅನಧಿಕೃತ ರಸ್ತೆಗಳನ್ನು ಅಧಿಕಾರಿಗಳು ಮುಚ್ಚಿಲ್ಲ ಎಂಬ ವಿಚಾರ ತಿಳಿದು ಬಂದಿದೆ.