24.5 C
Kadaba
Monday, March 17, 2025

ಹೊಸ ಸುದ್ದಿಗಳು

ಕುಕ್ಕೆ ಸುಬ್ರಹ್ಮಣ್ಯ: ಮನೋರಂಜನೆ ಹೆಸರಿನಲ್ಲಿ ಮಕ್ಕಳ ಶೋಷಣೆ: ಮಕ್ಕಳ ಹಕ್ಕು ರಕ್ಷಣೆ ಮಾಡುವವರು ಯಾರು?

Must read

 

kadabatimes.in
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಂಡು ಬಂದ ದೃಶ್ಯ

kadabatimes.in

ಕುಕ್ಕೆ ಸುಬ್ರಹ್ಮಣ್ಯ:  ಪುಟಾಣಿ ಬಾಲಕಿಯೊಬ್ಬಳು ಹಗ್ಗದ ಮೇಲೆ  ನಡೆದು ತನ್ನ ಪ್ರತಿಭೆ ತೋರಿಸುತ್ತಿದ್ದರೆ ಇತ್ತ ಚಪ್ಪಾಳೆಗಳ
ಸುರಿಮಳೆ ,ಪುಟಾಣಿಯ ಈ ಸಾಹಸ ಮೆಚ್ಚಿ ಕೆಲವರು ಕೈಲಾದಷ್ಟು ಸಹಾಯ ಮಾಡಿದರೆ, ಇನ್ನು ಕೆಲವರು ಮೆಚ್ಚುಗೆ
ವ್ಯಕ್ತಪಡಿಸಿ ಹೋಗುತ್ತಾರೆ


ಇಂತಹ ದೃಶ್ಯ ಕಂಡು ಬಂದದ್ದು ಕಡಬ ತಾಲೂಕಿನ
ಪ್ರಸಿದ್ದ ಕುಕ್ಕೆ ಸುಬ್ರಹ್ಮಣ್ಯದ ಷಷ್ಠಿ ಸಂಭ್ರಮದ ವೇಳೆಯಲ್ಲಿ. ಈರೀತಿಯಲ್ಲಿ   ತಮ್ಮ ಜೀವನ
ನಿರ್ವಹಣೆಗಾಗಿ ಈ ರೀತಿಯಲ್ಲಿ ಮಕ್ಕಳನ್ನು ಬಳಸಿಕೊಂಡು  ಬದುಕು ಮುನ್ನಡೆಸುತ್ತಿದ್ದಾರೆ.


kadabatimes.in

ಇದೊಂದು ಮನೋರಂಜನೆ ಎಂದು ಕಂಡರೂ ರಕ್ಷಣೆ
ಮತ್ತು ಪೋಷಣೆಯಿಂದ ವಂಚಿತ ಮಗುವಾಗಿದೆ.ಆದರೆ ದ.ಕ ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,
ಜಿಲ್ಲಾ ಮಕ್ಕಳ ರಕ್ಷಣಾ ಘಟಕ  ಏನು ಮಾಡುತ್ತಿದೆ  ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡತೊಡಗಿದೆ.


 ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ ತಡೆಗಟ್ಟುವುದು, ಭಿಕ್ಷೆ
ಬೇಡುವ ಮಕ್ಕಳನ್ನು ಪತ್ತೆ ಹಚ್ಚಿ ಬಾಲ ಮಂದಿರಕ್ಕೆ ಸೇರ್ಪಡೆ ಮಾಡುವುದು, ನಿರ್ಗತಿಕ ಮಕ್ಕಳು, ಮತ್ತಿತರರಿಗೆ
ಬಾಲ ಮಂದಿರದಲ್ಲಿ ಪುನರ್ ವಸತಿ ಕಲ್ಪಿಸುವುದು, ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಸೇರ್ಪಡೆ
ಮಾಡಲು ಏರ್ಪಾಡು ಮಾಡುವುದು. ವಿಶೇಷ ಅಗತ್ಯತೆಯುಳ್ಳ ಮಕ್ಕಳನ್ನು ಗುರುತಿಸಿ ಅಗತ್ಯ ಸೌಲಭ್ಯ ಕಲ್ಪಿಸುವುದು
ಸೇರಿದಂತೆ ಮಕ್ಕಳ ರಕ್ಷಣಾ ಘಟಕ ಹಲವು ಕಾರ್ಯ ಕ್ರಮಗಳನ್ನು ಹಮ್ಮಿಕೊಂಡು ಕೆಲಸ ಮಾಡಬೇಕಾದ ಇಲಾಖೆ್ಯ
ಅಧಿಕಾರಿಗಳು  


kadabatimes.in

ಜಿಲ್ಲೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿ ಇದ್ದು
ಮಕ್ಕಳಿಗೆ ಅಗತ್ಯವಾದ ರಕ್ಷಣೆ ಹಾಗೂ ಪೋಷಣೆ ಪುನರ್ವಸತಿ ವಿಚಾರಗಳಲ್ಲಿ ನಿಲವು ನಿರ್ಧಾರಗಳನ್ನು ತೆಗೆದುಕೊಳ್ಳವ
ನ್ಯಾಯ ಮಂಡಳಿ  ಈ ಬಗ್ಗೆ ಗಮನ ಹರಿಸಬೇಕೆಂದು ಸಾರ್ವಜನಿಕರ
ಆಗ್ರಹವಾಗಿದೆ.