

![]() ![]() |
ಕಡಬ ಪೊಲೀಸ್ ಠಾಣೆ |


ಕಡಬ: ಇಲ್ಲಿನ ಪೇಟೆ ವ್ಯಾಪ್ತಿಯಲ್ಲಿ ಪೊಲೀಸರ
ನಿರಂತರ ಗಸ್ತಿನಿಂದ ಹದ್ದುಬಸ್ತುನಲ್ಲಿದೆ. ಈ ನಡುವೆ
ಮದ್ಯರಾತ್ರಿಯಾದರೂ ಮಿನಿ ಕ್ಯಾಂಟೀನ್ ತೆರೆದಿರುವುದನ್ನು
ವಿಚಾರಿಸಲು ಹೋದ ಕರ್ತವ್ಯನಿರತ ಪೊಲೀಸರಿಗೆ ತಂಡವೊಂದು
ಅಡ್ಡಿಪಡಿಸಿ ವಾಗ್ವಾದ ನಡೆಸಿದ ಘಟನೆ ಅ.13
ರಂದು ನಡೆದಿದೆ.
ಕಾಲೇಜು
ರಸ್ತೆಯ ಬಳಿ ಮಿನಿ ಕ್ಯಾಂಟಿನ್ ಮುಚ್ಚುತ್ತಿದ್ದ ವೇಳೆ
ಮದ್ಯ ರಾತ್ರಿ ಬಂದ ಯುವಕರ ಗ್ಯಾಂಗ್ ತಿಂಡಿಗಾಗಿ ಬೇಡಿಕೆ
ಇಟ್ಟಿದ್ದು ಕ್ಯಾಂಟೀನ್ ಮಾಲಕ ಆಮ್ಲೇಟ್ ಮಾಡಿಕೊಡುತ್ತಿದ್ದ
ವೇಳೆ ಸ್ಥಳಕ್ಕೆ ಪೊಲೀಸರು ಬಂದು ವಿಚಾರಿಸಿದ್ದರು.
ವ್ಯವಹಾರ ಅವಧಿ ಮುಗಿದಿದ್ದರೂ ಅಂಗಡಿ ತೆರೆದಿರುವುದಕ್ಕೆ ವಿವರಣೆ ಕೇಳುತ್ತಿದ್ದ ಸಂದರ್ಭ ಸ್ಥಳದಲ್ಲಿದ್ದ ಯುವಕರ ಗ್ಯಾಂಗ್ ಪೊಲೀಸರೊಂದಿಗೆ
ದುರ್ವರ್ತನೆ ತೋರಿರುವುದಾಗಿ ತಿಳಿದುಬಂದಿದೆ.


ಸ್ಥಳದಲ್ಲಿದ್ದ
ಮತ್ತೋರ್ವ ಕಾಂಗ್ರೆಸ್
ಮುಖಂಡರ ಬೆಂಬಲಿಗರೆಂದು ಪರಿಚಯಿಸಿಕೊಂಡು ಪೊಲೀಸರ ಜೊತೆ ವಾಗ್ವಾದಕ್ಕೆ ಇಳಿದಿರುವುದಾಗಿ ತಿಳಿದುಬಂದಿದೆ. ಹೀಗಾಗಿ ಮುಖಂಡರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಪೊಲೀಸರನ್ನೇ ಈ ತಂಡ ಯಾಮಾರಿಸಿದೆಯಾ ಎಂಬ ಅನುಮಾನ ಉಂಟಾಗಿದೆ. ಈ ಘಟನೆ ಸಂಬಂಧಿಸಿ ಕ್ಯಾಂಟಿನ್
ಮಾಲಕನನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿದ್ದರೂ ಪೊಲೀಸರೊಂದಿಗೆ
ದುರ್ವರ್ತನೆ ತೋರಿದ ಯುವಕರ ಬಗ್ಗೆ ಕಡಬ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನ, ಸಂಶಯಕ್ಕೆ ಕಾರಣವಾಗಿದೆ.
ರಾಜಕೀಯ ಒತ್ತಡವೇ? :ರಾಜಕೀಯ ಒತ್ತಡದಿಂದ ಯುವಕರನ್ನು ಠಾಣೆಗೆ
ಕರೆಸಲಾಗಿಲ್ಲ ಎಂಬ ಸುದ್ದಿ ಹರಡಿದ್ದು ಈ ಬಗ್ಗೆ ಪೂರಕ ಮಾಹಿತಿ ಲಭಿಸಿಲ್ಲ. ಇನ್ನು ಬಡಪಾಯಿ ಕ್ಯಾಂಟೀನ್
ಮಾಲಕನನ್ನು ಮಾತ್ರ ಕರೆದಿರುವುದು ಚರ್ಚೆಗೆ ಕಾರಣವಾಗಿದೆ.

