![]() ![]() |
ರಾಮಕುಂಜ ಗ್ರಾಮ ಸಹಾಯಕ ಲಿಂಗಪ್ಪ ಗೌಡ |


ಕಡಬ: ಹೃದಯಘಾತದಿಂದ ಗ್ರಾಮ ಸಹಾಯಕರೊಬ್ಬರು ಮೃತಪಟ್ಟ ಬಗ್ಗೆ ರಾಮಕುಂಜ ಗ್ರಾಮದಿಂದ
ವ್ರದಿಯಾಗಿದೆ.


ರಾಮಕುಂಜ ಗ್ರಾಮದ ದೊಡ್ಡ ಉರ್ಕ ನಿವಾಸಿ,
ರಾಮಕುಂಜ ಗ್ರಾಮ ಸಹಾಯಕ ಲಿಂಗಪ್ಪ ಗೌಡ (58ವ.) ಮೃಪ್ತಪಟ್ಟವರು.


ಐದು ದಿನದ ಹಿಂದೆ ಎದೆ ನೋವು ಕಾಣಿಸಿಕೊಂಡಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು ಮನೆಗೆ ಬಂದಿದ್ದರು. ಅ.13 ರಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು ಎಂದು ವರದಿಯಾಗಿದೆ.
ಲಿಂಗಪ್ಪ ಗೌಡ ಅವರು 30 ಕ್ಕೂ ಹೆಚ್ಚು ವರ್ಷಗಳಿಂದ ರಾಮಕುಂಜ ಗ್ರಾಮ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು.

