ಕಡಬ: ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಹೊಸಮಠ ಸೇತುವೆ ಬಳಿ ಎರಡು ಕಾರುಗಳ ಮಧ್ಯೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದವರು ಅಪಾಯದಿಂದ ಪಾರಾದ ಘಟನೆ ಭಾನುವಾರ ನಡೆದಿದೆ.
ಸುಬ್ರಹ್ಮಣ್ಯ ಕುಲ್ಕುಂದ ನಿವಾಸಿ ಚೇತನ್ ಎಂಬವರು ಉಪ್ಪಿನಂಗಡಿ ಕಡೆಯಿಂದ ಚಲಾಯಿಸಿಕೊಂಡು ಬಂದು ಕಾರು ಬಲ್ಯ ಗ್ರಾಮದ ಬೀರುಕ್ಕು ನಿವಾಸಿ ಹರಿಶ್ಚಂದ್ರ ಎಂಬವರು ಚಲಾಯಿಸಿಕೊಂಡು ಹೊಸಮಠ ಪೇಟೆಯಿಂದ ಮನೆಗೆ ಹೋಗುತ್ತಿದ್ದಾಗ ಕಾರಿಗೆ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ಎರಡೂ ಕಾರುಗಳು ನಜ್ಜುಗುಜ್ಜಾಗಿ ಪಕ್ಕದ ಚರಂಡಿಗೆ ಬಿದ್ದಿವೆ. ಚೇತನ್ ಅವರ ಕಾರಿನಲ್ಲಿ ಮಹಿಳೆಯೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಸಂಜೆಯ ತನಕ ಪ್ರಕರಣ ದಾಖಲಾದ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ.