ಕಡಬ ಟೈಮ್ಸ್: ಸಹಕಾರ
ಸಂಘಗಳು ಭಾರತದಲ್ಲಿನ ಅತ್ಯದ್ಭುತ ವ್ಯವಸ್ಥೆ, ಜನರಿಗೆ ಸ್ವಾವಲಂಬಿ ಬದುಕು ಕಲ್ಪಿಸಿದೆ ಎಂದು ಮೈಸೂರು – ಕೊಡಗು ಲೋಕಸಭಾ ಸಂಸದ
ಯುದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯ
ಪಟ್ಟವರು.


ಅವರು
ಸೆ 10 ರಂದು ಸುಳ್ಯ ಪೆರಾಜೆಯ ಖಾಸಗಿ ಕಾರ್ಯಕ್ರಮವೊಂದರಲ್ಲಿ ನೂತನ ಸಭಾಭವನ ಮತ್ತು ಕಛೇರಿ ಉದ್ಘಾಟಿಸಿ ಮಾತನಾಡಿದರು.




ಸುಳ್ಯ
ಭಾಗಕ್ಕೆ ನಾನು ಈ ಹಿಂದೆ ಬೇಟಿ
ನೀಡಿ ಇಲ್ಲಿಯ ಯಕ್ಷಗಾನದ ಸವಿಯನ್ನು ಅನುಭವಿಸಿದ್ದೇನೆ, ಇಲ್ಲಿನ ಜ್ವಲಂತ ಸಮಸ್ಯೆಗಳ ಅರಿವಿದೆ, ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸುತ್ತೇನೆ ಎಂದರಲ್ಲದೆ, ಕೊಡಗು-
ಮೈಸೂರು ರೈಲು ಸಂಪರ್ಕ ವ್ಯವಸ್ಥೆ ಮುಂದಿನ ಯೋಜನೆಯಿದೆ.


ಕೊಡಗಿನ
ಕಾಫೀ ಬೆಳೆಗಾರರ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳು ಇವೆ, ಮುಂದೆ
ಮಡಿಕೇರಿಯಲ್ಲೂ ಕಚೇರಿ ತೆರೆದು, ಈ ಭಾಗದ ಜನರ
ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡುತ್ತೇವೆ,ಮುಂದಿನ ದಿನದಲ್ಲಿ ಪ್ರಧಾನಿಯವರ ಚಿಂತನೆಯಂತೆ 2047 ರ
ಹೊತ್ತಿಗೆ ಭಾರತ ಶೇಷ್ಟ ಭಾರತವಾಗುತ್ತಾ ಸಾಗಲು
ಎಲ್ಲರೂ ಸಹಕಾರಬೇಕಾಗಿದೆ, ಕೊಡಗು – ಮೈಸೂರು ಮಾದರೀ ಕ್ಷೇತ್ರವಾಗಿಸುವ ಗುರಿ ಹೊಂದೆದ್ದೇನೆ ಎಂದಿದ್ದಾರೆ.