ಕಡಬ ಟೈಮ್ಸ್, ಹುಬ್ಬಳ್ಳಿ
ನಗರದ ಕಿತ್ತೂರು
ಚೆನ್ನಮ್ಮ ಹಾಗೂ ಸುತ್ತಮುತ್ತ ಫ್ಲೈಓವರ್ ಕಾಮಗಾರಿ ನಡೆಯುತ್ತಿದ್ದು, ಕೋರ್ಟ್ ವೃತ್ತ ಬಳಿ ಸೆ.10ರ ಮಂಗಳವಾರ ಕರ್ತವ್ಯದಲ್ಲಿದ್ದ
ಎಎಸ್ಐ ತಲೆಯ ಮೇಲೆ
ಕಬ್ಬಿಣದ ರಾಡ್ ಬಿದ್ದು ತೀವ್ರ ಗಾಯಗೊಂಡಿದ್ದಾರೆ.




ಫ್ಲೈ
ಓವರ್ ಮೇಲೆ ಕಾರ್ಮಿಕರು ಕಬ್ಬಿಣದ ಸಲಾಕೆ(ರಾಡ್)ಗಳನ್ನು ಜೋಡಿಸುತ್ತಿರುವ ಸಂದರ್ಭದಲ್ಲಿ ಕೈಜಾರಿ ಉಪನಗರ ಪೊಲೀಸ್ ಠಾಣೆಯ ಎಎಸ್ಐ ತಲೆ ಮೇಲೆ
ಕಬ್ಬಿಣದ ರಾಡ್ ಬಿದ್ದಿದೆ. ತೀವ್ರ ರಕ್ತಸ್ರಾವ ಉಂಟಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಕಾಮಗಾರಿ
ಸ್ಥಳದಲ್ಲಿ ಯಾವುದೇ ರೀತಿಯ ಸುರಕ್ಷತಾ ಕ್ರಮಗಳನ್ನು ಗುತ್ತಿಗೆದಾರರು ತೆಗೆದುಕೊಂಡಿಲ್ಲವೆಂದು ತಿಳಿದುಬಂದಿದೆ.ಕಬ್ಬಿಣದ ರಾಡ್ ಬಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಎಎಸ್ಐ ಅವರನ್ನು ಜಿಲ್ಲಾ
ಉಸ್ತುವಾರಿ ಸಚಿವ ಸಂತೋಷ ಲಾಡ್ ಮತ್ತು ಜಿಲ್ಲಾಧಿಕಾರಿ ದಿವ್ಯ ಪ್ರಭು ಭೇಟಿ ಕೊಟ್ಟು ಆರೋಗ್ಯ ವಿಚಾರಿಸಿದರು.

