ನೆಲ್ಯಾಡಿ:
ಸೆ.7 ರಂದು ನೆಲ್ಯಾಡಿಯಲ್ಲಿ ನಡೇದ ಸಾರ್ವಜನಿಕ ಗಣೇಶೋತ್ಸವದ
ವೈಭವದ ಶೋಭಾಯಾತ್ರೆಯಲ್ಲಿ ಶಾಸ್ತಾರ
ಫ್ರೆಂಡ್ಸ್ ನೆಲ್ಯಾಡಿ ನಿರ್ಮಾಣದ ದೇಶಭಿಮಾನ ಮೂಡಿಸುವ ಸ್ಥಬ್ದ ಚಿತ್ರ ಜನ ಮೆಚ್ಚುಗೆ ಪಡೆದಿದೆ.


![]() ![]() |
ಶಾಸ್ತಾರ ಫ್ರೆಂಡ್ಸ್ ನೆಲ್ಯಾಡಿ ನಿರ್ಮಾಣದ ಸ್ಥಬ್ದ ಚಿತ್ರ |


ಮೆರವಣಿಗೆಯಲ್ಲಿ
ಅನೇಕ ಸ್ತಬ್ದ ಚಿತ್ರಗಳು ರಂಗು
ನೀಡಿದ್ದು, ಅದರಲ್ಲೂ ಶಾಸ್ತಾರ ಫ್ರೆಂಡ್ಸ್ ಕುತ್ರಾಡಿ ಹಾರ್ಪಳ ನೆಲ್ಯಾಡಿ ಸಂಘದ ಸದಸ್ಯರು ನಿರ್ಮಾಣಮಾಡಿದ್ದ, “ಕಾರ್ಗಿಲ್ 25 ನೇ ವಿಜಯೋತ್ಸೋವದ ನೆನಪಿಗಾಗಿ
” ಪ್ರಸ್ತುತ ಪಡಿಸಿದ ಸ್ತಬ್ದ ಚಿತ್ರವು
ಮಿಲಿಟರಿ ಸಾಧನ ಗಳ ಬಗ್ಗೆ ಪರಿಚಯಾತ್ಮಕ ಮಾದರಿ ಸ್ತಬ್ದ
ಚಿತ್ರವಾಗಿ ಬಿಂಬಿತವಾಗಿದೆ.
ಆರ್ಟಿಲರಿ
ಗನ್ ಈ ಸ್ತಬ್ದ ಚಿತ್ರಕ್ಕೆ ಸಂಘದ
ಸದಸ್ಯರು ನಿವೃತ್ತ ಸೇನಾ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದು, ಸಂಘದ ಸದಸ್ಯರು ಹಗಲಿರುಳು ತಾವೇ ಕೆಲಸ ಮಾಡಿ ಈ ಗನ್ ನ
ರಚನೆ ಮಾಡಿದ್ದಾರೆ.


ಕಾರ್ಗಿಲ್
ಕದನದಲ್ಲಿ ಪಾಕಿಸ್ತಾನವನ್ನು
ಹೀನಾಯಾವಾಗಿ ಸೋಲಿಸಲು ಬೂಫೋರ್ಸ್ ಪಿರಂಗಿಗಳು ಪ್ರಮುಖ ಪಾತ್ರ ವಹಿಸಿದ್ದವು, ಅದೇ ಬೋಫೋರ್ಸ್ ಪಿರಂಗಿಗಳು ಇಂದು ಆರ್ಟಿಲರಿ ಗನ್ ಗಳಂತೆ ಬದಲಾಗಿದೆ,ಇಂದು ದೇಶದ ಸೈನ್ಯಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಆರ್ಟಿಲರಿ ಗನ್ ಹೋಲುವ ಸ್ತಬ್ದ ಚಿತ್ರ ಭಾರೀ ಜನಮಣ್ಣನೆಗೆ ಪಾತ್ರವಾಗಿದೆ.
Short News In English: A patriotic film produced by Shastara Friends, Nelyadi, was appreciated by the people during the public Ganeshotsava procession held at Nelyady on September 7.
The procession was graced with many silent films, especially the silent film “In Commemoration of Kargil 25th Victory Day” produced by the members of Shastara Friends Kutradi Harpala Nelyadi Sangh was presented as an introductory model silent film about military equipment.
Artillery Gun The members of the association got information from the retired army officers for this silent film, and the members of the association worked day and night to create this gun. Bofors cannons played a major role in defeating Pakistan in the Kargil battle, the same Bofors cannons have evolved into artillery guns, today powering the country’s army.


The silent film, which resembles an artillery gun in action at present, is a huge hit.