ಕಡಬ:
ಸಂಚಾರಿ ನಿಯಮ ಉಲ್ಲಂಘಿಸಿ ಬೈಕ್ ಗೆ ಪ್ರತ್ಯೇಕ ಹೊಗೆ ಕೊಳವೆ (ಸೈಲೆನ್ಸರ್) ಅಳವಡಿಸಿಕೊಂಡು ಶಬ್ದ
ಮಾಲಿನ್ಯ ಮಾಡುತ್ತಾ ಅತೀ ವೇಗದಲ್ಲಿ ಸಂಚರಿಸುತ್ತಿದ್ದ ಎರಡು ಬೈಕ್ ಸವಾರರನ್ನು ತಡೆದು ಪೊಲೀಸರು ದಂಡ
ವಿಧಿಸಿದ ಘಟನೆ ಸೆ.10ರಂದು ವರದಿಯಾಗಿದೆ.




ಕಡಬ
ಠಾಣಾ ವ್ಯಾಪ್ತಿಯ ಕುಟ್ರುಪ್ಪಾಡಿ ಗ್ರಾ.ಪಂ ವ್ಯಾಪ್ತಿಯ ಬಲ್ಯದಲ್ಲಿ ಪ್ರಶಾಂತ್ ಮತ್ತು ಕುಮಾರ್ ಎಂಬ
ಇಬ್ಬರು ಬೈಕ್ ಸವಾರರು ತಮ್ಮ ವಾಹನಕ್ಕೆ ಪ್ರತ್ಯೇಕವಾಗಿ
ಹೊಗೆ ಕೊಳವೆ ಅಳವಡಿಸಿದ್ದರು.


ಇದರಿಂದ
ಶಬ್ದ ಮಾಲಿನ್ಯವಾಗುವುದಲ್ಲದೆ ಸಂಚಾರಿ ನಿಯಮವನ್ನು ಉಲ್ಲಂಘಿಸಿದ ಕಾರಣಕ್ಕೆ ದಂಡ ವಿಧಿಸಿದಲ್ಲದೆ ಸೈಲೆನ್ಸರ್ ನ್ನು ತೆಗೆಸಿ ಬಳಿಕ ಬಿಡುಗಡೆಗೊಳಿಸಿದ್ದಾರೆ.
ಕಡಬ ಎಸ್ .ಐ. ಅಭಿನಂದನ್ ನೇತೃತ್ವದ ಪೊಲೀಸರು ಕಾರ್ಯಾಚರಣೆಯಲ್ಲಿ
ಪಾಲ್ಗೊಂಡಿದ್ದರು.

