24.5 C
Kadaba
Monday, March 17, 2025

ಹೊಸ ಸುದ್ದಿಗಳು

ಕುಕ್ಕೆ ಸುಬ್ರಹ್ಮಣ್ಯ: ಕುಮಾರಧಾರ ದಿಂದ ಕುಲ್ಕುಂದವರೆಗೆ ರಸ್ತೆಬದಿಯ ತ್ಯಾಜ್ಯ ಹೆಕ್ಕಿದ ಪರಿಸರ ಪ್ರೇಮಿ ತಂಡ

Must read

ಕುಕ್ಕೆ ಸುಬ್ರಹ್ಮಣ್ಯ :ಇಲ್ಲಿನ ಪ್ರಮುಖ ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಎಸೆದಿದ್ದ  ತ್ಯಾಜಗಳನ್ನು 
ರವಿಕಕ್ಕೆ ಪದವು ಸೇವಾ ಟ್ರಸ್ಟ್  ನೇತೃತ್ವದ ತಂಡ ಸ್ವಚ್ಚತಾ ಕಾರ್ಯ ಮಾಡುವ ಮೂಲಕ ಕಸದ ರಾಶಿಗಳಿಗೆ ಮುಕ್ತಿ ನೀಡಿದೆ.
ಪ್ರವಾಸಿಗರು ಹೆಚ್ಚು ಓಡಾಡುವ   ಸುಬ್ರಹ್ಮಣ್ಯದ ಕುಮಾರಧಾರ ದಿಂದ ಕುಲ್ಕುಂದವರೆಗೆ  ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯಗಳನ್ನು ಸಂಗ್ರಹಿದರು.ಇವರ ಜೊತೆ
ರೋಟರಿ ಕ್ಲಬ್ ನ ಸದಸ್ಯರೂ ಜೊತೆಯಾಗಿದ್ದಾರೆ.
ಸ್ವಚ್ಚತಾ ಕಾರ್ಯದಲ್ಲಿ ಭಾಗಿಯಾದವರಿಗೆ  ಶ್ರೀ ಗಣೇಶ್ ಮೆಡಿಕಲ್ ನವರು ಕೈಗೆ ಗ್ಲೌಸ್  ನೀಡಿದರೆ,  ಹೋಟೆಲ್ ಕುಮಾರಧಾರ ದಿಂದ ಮುಖ್ಯಸ್ಥರು ಉಪಹಾರ ನೀಡಿ ಸಹಕರಿಸಿದ್ದಾರೆಸಂಗ್ರಹವಾದ ತ್ಯಾಜ್ಯವನ್ನು  ಗ್ರಾಮ ಪಂಚಾಯತ್ ವತಿಯಿಂದ ವಿಲೇವಾರಿ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರವಿಕಕ್ಕೇಪದವು ಅವರು,ಪ್ರವಾಸಿಗರು ಎಲ್ಲೆಂದರಲ್ಲಿ ಕಸ ಎಸೆಯುವುದು ಪರಿಸರ ಹಾಳು ಮಾಡಬಾರದು, ಪ್ರಕೃತಿ ಸ್ವಚ್ಛವಾಗಿದ್ದರೆ, ನಮ್ಮಗೆಲ್ಲ ಒಳ್ಳೆ ಆಗೋಗ್ಯ ಸಿಗುತ್ತದೆ ಎಂದರು
ರೋಟರಿ ಅಧ್ಯಕ್ಷ ಚಂದ್ರಶೇಖರ್ ನಾಯರ್, ಅಂತರಾಷ್ಟ್ರೀಯ ಸೀನಿಯರ್ ಚೇಂಬರ್ ಸುಬ್ರಹ್ಮಣ್ಯ ಅಧ್ಯಕ್ಷ ರವಿಕಕ್ಕೇಪದವು, ಸದಸ್ಯ ದಾಮೋದರ್, ಸೇಸಪ್ಪ ಗೌಡ ಸೇರಿದಂತೆ ಸುಮಾರು ಮೂವತ್ತುಕ್ಕೂ ಹೆಚ್ಚು ಸ್ವಯಂ ಸೇವಕರು ಪಾಲ್ಗೊಂಡ ವಾರದ ಸ್ವಚ್ಛತಾ ಕಾರ್ಯವನ್ನು ಯಶಸ್ವಿಗೊಳಿಸಿದರು.