24.5 C
Kadaba
Monday, March 17, 2025

ಹೊಸ ಸುದ್ದಿಗಳು

ಕಡಬ ಟೈಮ್ಸ್ ನಲ್ಲಿ ಪ್ರಕಟವಾದ ಸುದ್ದಿಯ ಹೆಡ್ ಲೈನ್ ತಿರುಚಿ ವೈರಲ್ ಗೊಳಿಸಿದ ಕಿಡಿಗೇಡಿಗಳು

Must read

ಕಡಬ ಟೈಮ್ಸ್: ಕಡಬ ಟೈಮ್ಸ್ ನಲ್ಲಿ ಅಕ್ರಮ ಕಸಾಯಿಖಾನೆ ಕುರಿತ ವರದಿಯು ಸೆ.6ರಂದು ಪ್ರಕಟವಾಗಿದ್ದು ಯಾರೋ ಕಿಡಿಗೇಡಿಗಳು ವಾಟ್ಸಪ್ ನಲ್ಲಿ ಸುದ್ದಿಯ ತಲೆಬರಹ ಬದಲಾಯಿಸಿ   ವೈರಲ್ ಮಾಡಿರುವುದು ಗಮನಕ್ಕೆ ಬಂದಿದೆ.
“ಕಡಬ: ಮನೆಯೊಂದರ ಹಿಂಬದಿ ಅಕ್ರಮ ಗೋವಧೆ: ಪೊಲೀಸರಿಂದ ದಾಳಿ, ಇಬ್ಬರು ವಶಕ್ಕೆ” ಎಂಬ ತಲೆ ಬರಹದಲ್ಲಿ ಸುದ್ದಿ ಪ್ರಕಟಿಸಲಾಗಿತ್ತು.ಆದರೆ ಕಿಡಿಗೇಡಿಗಳು “ಕಡಬ: ಮನೆಯೊಂದರ ಹಿಂಬದಿ ಅಕ್ರಮ ಗೋವಧೆ: ಪೊಲೀಸರಿಂದ ದಾಳಿ,ಬಜರಂಗದಳದ  ಇಬ್ಬರು ವಶಕ್ಕೆ” ಎಂದು ಬದಲಾಯಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ ಮಾಡಿದ್ದಾರೆ.
ವಾಟ್ಸಪ್ ನಲ್ಲಿ ಮಾತ್ರ ಹೆಡ್ ಲೈನ್ ಬದಲಾಯಿಸಿದರೂ ವೆಬ್ ಸೈಟ್ ನ ಮೂಲ ಲೇಖನ ತಿದ್ದುಪಡಿ ಮಾಡಲು ಸಂಪಾದಕರು ಹೊರತುಪಡಿಸಿ ಯಾರಿಗೂ ಅವಕಾಶ ಇರುವುದಿಲ್ಲ, ವೆಬ್ ತಾಣದಲ್ಲಿ ಪ್ರಕಟವಾದ ಲೇಖನವೇ ಅಂತಿಮವಾಗಿರುತ್ತದೆ.
ಹಬ್ಬದ ಸಮಯದಲ್ಲಿಯೇ ಸುದ್ದಿಯನ್ನು ತಿರುಚಿ ಸಮಾಜದಲ್ಲಿ ಶಾಂತಿ ಕದಡಲು ಮುಂದಾಗಿರುವ ಕಿಡಿಗೇಡಿಗಳ ವಿರುದ್ದ ದೂರು ನೀಡಲಾಗವುದು.