ಕಡಬ ಟೈಮ್ಸ್: ಕಡಬ:
ಮನೆಯೊಂದರ ಹಿಂಬದಿ ನಡೆಯುತ್ತಿದ್ದ
ಅಕ್ರಮ ಕಸಾಯಿಖಾನೆಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದು ಇಬ್ಬರನ್ನು ವಶಕ್ಕೆ ಪಡೆದ
ಘಟನೆ ಸೆ.6 ರ ಮುಂಜಾನೆ ನಡೆದಿದೆ.






ಕುಟ್ರುಪ್ಪಾಡಿ
ಗ್ರಾ.ಪಂ ವ್ಯಾಪ್ತಿಯ ಕಾಯರ್ತಡ್ಕ ಸಮೀಪದ ಕಾರ್ಕಳ ಎಂಬಲ್ಲಿ ಮನೆಯೊಂದರಲ್ಲಿ
ಜಾನುವಾರು ವಧೆ ಮಾಡುತ್ತಿರುವ ಕುರಿತು ಬಜರಂಗದಳಕ್ಕೆ ಮಾಹಿತಿ ಲಭಿಸಿತ್ತು. ಪೊಲೀಸರಿಗೆ ಮಾಹಿತಿ ರವಾನಿಸಿದ
ಮೇರೆಗೆ ಕಡಬ ಠಾಣಾ ಎಸ್.ಐ ನೇತೃತ್ವದ ಪೊಲೀಸರು ದಾಳಿ ಮಾಡಿರುವುದಾಗಿ ತಿಳಿದು ಬಂದಿದೆ.


ಸ್ಥಳದಲ್ಲಿ
ಗೋವಧೆ ಮಾಡಲು ಬಳಸಿದ ಸಾಧನ, ದನದ ರುಂಡ, ಸುಮಾರು 70 ಕೆಜಿಯಷ್ಟು ಮಾಂಸ ಪತ್ತೆಯಾಗಿದೆ ಎಂದು ತಿಳಿದು
ಬಂದಿದೆ. ಈ ಘಟನೆಗೆ ಸಂಬಂಧಿಸಿ ಬಿನೊಯ್ ಮತ್ತು ಕುಟ್ಟಪ್ಪನ್ ಎಂಬವರನ್ನು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದ್ದು ಕಡಬ ಪೊಲೀಸರು ಕಾನೂನು ಪ್ರಕ್ರಿಯೆ ಮುಂದುವರಿಸಿರುವುದಾಗಿ
ತಿಳಿದು ಬಂದಿದೆ.