26.2 C
Kadaba
Sunday, March 16, 2025

ಹೊಸ ಸುದ್ದಿಗಳು

ರಬ್ಬರ್ ಟ್ಯಾಪರ್ ಜ್ವರದಿಂದ ಮೃತ್ಯು: ರಕ್ತಪರೀಕ್ಷೆಯ ವರದಿಯಲ್ಲಿ ಇಲಿ ಜ್ವರವೆಂದು ದೃಢ

Must read

 ಕಡಬ ಟೈಮ್ಸ್, ಅಸೌಖ್ಯದಿಂದಾಗಿ
ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ರಬ್ಬರ್ ಟ್ಯಾಪಿಂಗ್ ಕಾರ್ಮಿಕ ಯುವಕನೋರ್ವ  ಇಲಿ
ಜ್ವರದಿಂದ ಮೃತಪಟ್ಟ ಘಟನೆ ಸುಳ್ಯದ  ಕನಕಮಜಲು
ಗ್ರಾಮದ ಆನೆಗುಂಡಿಯಲ್ಲಿ ಸೆ.1ರಂದು ರಾತ್ರಿ ಸಂಭವಿಸಿದೆ.

kadabatimes.in

ಮೃತ ಯುವರಾಜ್


kadabatimes.in

ಕನಕಮಜಲು
ಗ್ರಾಮದ ಆನೆಗುಂಡಿ ಸಿ.ಆರ್.ಸಿ.
ತಮಿಳು ಕಾಲನಿಯ  ಯುವರಾಜ್
(ದಿನೇಶ್(36 ) ) ಅವರು ಜ್ವರದ ಹಿನ್ನೆಲೆಯಲ್ಲಿ ಕಳೆದ ವಾರ ಸುಳ್ಯದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಜ್ವರ ಮತ್ತಷ್ಟು ಹೆಚ್ಚಾದ  ಹಿನ್ನೆಲೆಯಲ್ಲಿ
ಸುಳ್ಯದಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

kadabatimes.in


kadabatimes.in

ಅಲ್ಲಿ
ರಕ್ತಪರೀಕ್ಷೆಯ ವರದಿಯಲ್ಲಿ ಇಲಿಜ್ವರ ಎಂದು ದೃಢಪಟ್ಟಿದ್ದು, ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸೆ.1ರಂದು ರಾತ್ರಿ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ. ಯುವರಾಜ್ ಅವರು ರಬ್ಬರ್ ಟ್ಯಾಪಿಂಗ್ ಕಾರ್ಮಿಕರಾಗಿ ಕಳೆದ ಹಲವಾರು ವರ್ಷಗಳಿಂದ ದುಡಿಯುತ್ತಿದ್ದರು.