ಕಡಬ: ಗೌರಿ ಗಣೇಶ, ಈದ್ ಮಿಲಾದ್ ಮತ್ತು ಮೇರಿ ಮಾತಾ ಹಬ್ಬದ ಆಚರಣೆಯನ್ನು ಶಾಂತಿಯುತವಾಗಿ ನಡೆಸುವ ಬಗ್ಗೆ ಸಹಕಾರ ನೀಡುವ ಕುರಿತಾಗಿ ನಾಳೆ ಸೆ.6 ರಂದು ಬೆಳಿಗ್ಗೆ 10.00 ಗಂಟೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಸರ್ವ ಧರ್ಮದ ಪ್ರಮುಖರ ಶಾಂತಿ ಸಭೆ ನಡೆಯಲಿದೆ.


ಎಲ್ಲಾ ಗಣೇಶೋತ್ಸವ ಸಮಿತಿಯ ನೇತಾರರು, ಎಲ್ಲಾ ಮಸೀದಿಯ ಮುಖ್ಯಸ್ಥರುಗಳು, ಎಲ್ಲಾ ಚರ್ಚ್ ನ ಮುಖ್ಯಸ್ಥರು ಗಳು,ಎಲ್ಲಾ ಧಾರ್ಮಿಕ ರಾಜಕೀಯ ಮುಖಂಡರು ಸಭೆಗೆ ಆಗಮಿಸಬೇಕಾಗಿ ಕಡಬ ಠಾಣಾ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





