39.8 C
Kadaba
Sunday, March 16, 2025

ಹೊಸ ಸುದ್ದಿಗಳು

ಕೊಕ್ಕಡ: ಅಂಗಡಿ ಜಗಲಿಯಲ್ಲಿ ಕುಳಿತ ಪರಿಶಿಷ್ಟ ಸಮುದಾಯದ ವ್ಯಕ್ತಿಯ ಕೈ ಮುರಿದ ಅಂಗಡಿ ಮಾಲೀಕ

Must read

 ಕೊಕ್ಕಡ: ಮಳೆ ಬಂದ ಕಾರಣ ಅಂಗಡಿಯ ಜಗಲಿಯಲ್ಲಿ  ಕುಳಿತ ಪರಿಶಿಷ್ಟ ಸಮುದಾಯದ  ವೃದ್ದನ ಮೇಲೆ  ಅಂಗಡಿ ಮಾಲಿಕ ಜಾತಿ ನಿಂದನೆ ಮಾಡಿ ಮರದ ರೀಪಿನಿಂದ ಹಲ್ಲೆ ನಡೆಸಿದ ಘಟನೆ ಸೆ.2ರಂದು ನಡೆದಿದ್ದು ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

kadabatimes.in


kadabatimes.in

ಹಲ್ಲೆಗೆ ಒಳಗಾದ ವ್ಯಕ್ತಿ ಕೊಕ್ಕಡ ಗ್ರಾಮದ ಮಂಚ ಮೊಗೇರ (67) ಎಂಬವರಾಗಿದ್ದಾರೆ. ಕೊಕ್ಕಡ ನಿವಾಸಿಯಾಗಿರುವ ರಾಮಣ್ಣ ಗೌಡ ಎಂಬವರೇ ಹಲ್ಲೆ ನಡೆಸಿದ ಆರೋಪಿ.

ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ಮಂಚ ಮೊಗೇರ


ಕೊಕ್ಕಡ ಪೇಟೆಗೆ ಹೋಗಿದ್ದ  ವೇಳೆ ಮಳೆ ಬಂದ ಕಾರಣ   ಕೊಕ್ಕಡ ಹಳ್ಳಿಂಗೇರಿಯಲ್ಲಿ ಅಂಗಡಿಯೊಂದರ ಜಗಲಿಯಲ್ಲಿ ಕುಳಿತಿದ್ದಾರೆ.   ವೇಳೆ ಅಲ್ಲಿದ್ದ ಅಂಗಡಿ ಮಾಲಕ 
ಪ್ರಶ್ನಿಸಿ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಮರದ
ರೀಪಿನೊಂದಿಗೆ ಬಂದು ಜಾತಿ ನಿಂದನೆ ಮಾಡಿ ತಲೆ ಹಾಗೂ ಬೆನ್ನಿಗೆ ಹಲ್ಲೆ ನಡೆಸಿದ್ದಾನೆ ಎಂದು ಧರ್ಮಸ್ಥಳ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ .

kadabatimes.in

ಹಲ್ಲೆಗೆ ಒಳಗಾದ  ವೃದ್ದನನ್ನು  ಕೊಕ್ಕಡ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ತಲೆಗೆ ಹಾಗೂ ಬೆನ್ನಿಗೆ ಗಾಯಗಳಾಗಿದೆ. ಧರ್ಮಸ್ಥಳ ಪೊಲೀಸರು ಹಲ್ಲೆಗೆ ಒಳಗಾದವರಿಂದ ಹೇಳಿಕೆಯನ್ನು ಪಡೆದು ಇದೀಗ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಆಸ್ಪತ್ರೆಯಲ್ಲಿ ಸಂಘಟನೆಯ ಪ್ರಮುಖರು

ಠಾಣೆಯಲ್ಲೇ
ಠಿಕಾಣಿ ಹೂಡಿದ ಸಂಘಟನೆಯ ಮುಖಂಡರು:
ಹಲ್ಲೆ ಘಟನೆ ಬಗ್ಗೆ ಮಾಹಿತಿ ಪಡೆದ
ಭೀಮ್ ಆರ್ಮಿ ಸಂಘಟನೆಯ ಪ್ರಮುಖರು ಠಾಣೆಗೆ ಭೇಟಿ ನೀಡಿದ್ದು ಈ ಸಂದರ್ಭ ಮಾತುಕತೆ ಮೂಲಕ ಬಗೆ ಹರಿಸುವ
ಪ್ರಯತ್ನ ಮಾಡಲು ಪೊಲೀಸರು ಸೂಚಿಸಿದ್ದರು ಎನ್ನಲಾಗಿದೆ.ಇದಕ್ಕೆ ಆಸ್ಪದ ಕೊಡದ ಸಂಘಟನೆಯ ಪ್ರಮುಖರು
ಗಂಭೀರ ಹಲ್ಲೆ ಪ್ರಕರಣಕ್ಕೆ ಕೇಸು ದಾಖಲಿಸುವಂತೆ ಒತ್ತಾಯಿಸಿದ್ದರು.ಅಲ್ಲದೆ ಎಫ್ ಐ ಆರ್ ದಾಖಲಿಸದೆ
ಸ್ಥಳದಿಂದ ತೆರಳುವುದಿಲ್ಲ ಎಂದು ಪಟ್ಟು ಹಿಡಿದು ರಾತ್ರಿ ಪೂರ್ತಿ ಠಾಣಾ ಬಳಿ ನಿಂತಿದ್ದರು. ಮರು
ದಿನ ಮುಂಜಾನೆ ವೇಳೆಗೆ ಪೊಲೀಸರು ಕೇಸು ದಾಖಲಿಸಿಕೊಂಡಿರುವುದಾಗಿ ಸಂಘಟನೆಯ ಅಧ್ಯಕ್ಷ ರಾಘವ ಕಳಾರ
ಎಂಬವರು ಮಾದ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

kadabatimes.in

ವೃದ್ದನಿಗೆ ಹಲ್ಲೆ ನಡೆಸಿದ ಆರೋಪಿಯನ್ನು
ಬಂಧಿಸದಿದ್ದಲ್ಲಿ ಪ್ರತಿಭಟನೆ ಮಾಡುವ ಎಚ್ಚರಿಕೆಯ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ
.