ಕುಕ್ಕೆಸುಬ್ರಹ್ಮಣ್ಯ
: ಆದಾಯ ಗಳಿಕೆಯಲ್ಲಿ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿರುವ ಕುಕ್ಕೆ
ಸುಬ್ರಹ್ಮಣ್ಯಕ್ಕೆ ಸಂಪರ್ಕಿಸುವ ಪ್ರಮುಖ ರಾಜ್ಯ
ರಸ್ತೆ ( ಕುಮಾರಧಾರ- ಕೈಕಂಬ) ಯಲ್ಲಿ ಅಪಾಯಕಾರಿ ಗುಂಡಿಗಳು ನಿರ್ಮಾಣವಾಗಿದ್ದು
ವಾಹನ ಸವಾರರು ಈ ಗುಂಡಿಗಳನ್ನು ಅಳತೆ ಮಾಡುವ ಮೂಲಕ
ಅಧಿಕಾರಿಗಳ ಗಮನ ಸೆಳೆದಿದ್ದಾರೆ.




![]() ![]() |
ರಸ್ತೆಯಲ್ಲಿನ ಗುಂಡಿಗಳನ್ನು ಅಳತೆ ಮಾಡುತ್ತಿರುವ ಸವಾರರು |
ರಾಜ್ಯದ
ವಿವಿಧ ಮೂಲೆಗಳಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವ
ಭಕ್ತರು,ಸಾರ್ವಜನಿಕರು ಈ ಪ್ರಮುಖ ರಸ್ತೆಯಲ್ಲೇ ಅವಲಂಬಿಸಬೇಕಾಗಿದೆ.
ಎಂತಹ ಪರಿಣತಿ ಪಡೆದ ಚಾಲಕನಿಂದಲೂ ಈ
ಹೊಂಡ ತಪ್ಪಿಸಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ಎದುರಾಗಿದೆ.
ವಿವಿಧ ಇಲಾಖೆಗಳ ಅಧಿಕಾರಿಗಳೂ ಇದೇ ರಸ್ತೆಯಲ್ಲಿ ಎಸಿ ಕಾರಿನಲ್ಲಿ
ಸಂಚರಿಸುತ್ತಿದ್ದರೂ ರಸ್ತೆ ಗುಂಡಿಯಿಂದ ಸವಾರರಿಗೆ
ತೊಂದರೆಯಾಗುವುದರ ಬಗ್ಗೆ ಗಮನವೇ ಹರಿಸಿಲ್ಲ ಎಂಬುದು ಸ್ಥಳೀಯ ವಾಹನ ಸವಾರರ ಆರೋಪವಾಗಿದೆ.


![]() ![]() |
ಆಟೋ ರಿಕ್ಷಾ ಗುಂಡಿಗೆ ಬಿದ್ದಿರುವುದು |
ಮಂಗಳವಾರದಂದು
ಸ್ಥಳೀಯ ವಾಹನ ಸವಾರರಾದ ಉದ್ಯಮಿ
ಸೀತಾರಾಮ ಗೌಡ, ದಿನೇಶ್ ಗಾಂಗೆಯ ,ಉಮೇಶ್ ಅವರು ಟೇಪ್ ಹಿಡಿದು ಅಳತೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಕುಮಾರಧಾರ
ಸೇತುವೆ ಬಳಿ ಸುಮಾರು 12 ಫೀಟ್ ಅಗಲಕ್ಕೆ, ಮೂರು ಫೀಟ್ ಆಳದ ಹೊಂಡ ಪತ್ತೆಯಾಗಿರುವುದನ್ನು ಮಾದ್ಯಮಕ್ಕೆ ತಿಳಿಸಿದ್ದಾರೆ.
![]() ![]() |
ರಸ್ತೆ ಗುಂಡಿಯನ್ನು ಅಳತೆ ಮಾಡುತ್ತಿರುವುದು |
ಈ ಹೋಂಡ
ತಪ್ಪಿಸುವ ಬರದಲ್ಲಿ ಬೈಕ್ ಸವಾರರು ಮಗುಚಿ ಬಿದ್ದು ಅಪಘಾತ ಸಂಭವಿಸುವ ಸಾಧ್ಯತೆಗಳೇ ಹೆ್ಚ್ಚು. ಇನ್ನು
ನಾಲ್ಕು ಚಕ್ರದ ವಾಹನಗಳಂತೂ ಹೊಂಡ ತಪ್ಪಿಸಲು ರೋಂಗ್ ಸೈಡ್ ನಲ್ಲಿ ಪ್ರಯಾಣ ಮಾಡುತ್ತಾರೆ. ದುರ್ಘಟನೆಗಳು ಸಂಭವಿಸುವ ಮೊದಲೇ ಅಧಿಕಾರಿಗಳು ಸಂಬಂಧಪಟ್ಟ ಇಲಾಖೆಯವರು ಆದಷ್ಟು ಬೇಗ ಈ ಹೊಂಡಗಳನ್ನು ಮುಚ್ಚಿ
ಕ್ಷೇತ್ರಕ್ಕೆ
ಆಗಮಿಸುವ ಭಕ್ತರಿಗೆ, ವಾಹನ
ಸವಾರರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದ್ದಾರೆ.

