ಕಡಬ:
ಮಾನಸಿಕ ಖಿನ್ನತೆಗೆ ಒಳಗಾಗಿ ಮನೆಯಿಂದ ಹೊರ ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ತೋಟವೊಂದರ
ಕೆರೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ಕಡಬದ ಬೆಳಂದೂರು ಗ್ರಾಮದಿಂದ ವರದಿಯಾಗಿದೆ.


![]() ![]() |
Google image |


ಕಡಬ
ತಾಲೂಕು ಬೆಳಂದೂರು ಗ್ರಾಮದ ಬೊಟ್ಟತ್ತಾರು ಮನೆಯ ವಸಂತ
ಪಿ. (36 ವರ್ಷ) ವೃತಪಟ್ಟವರು.
ಕಳೆದ
ಒಂದು ವರ್ಷದಿಂದ ಯಾವುದೋ ಮಾನಸಿಕ ಖಿನ್ನತೆಗೆ ಒಳಗಾಗಿ ಕಳೆದ 3 ದಿವಸಗಳಿಂದ ಮಾನಸಿಕ ಖಿನ್ನತೆ ಉಲ್ಭಣಗೊಂಡು
ಮನೆಯಲ್ಲಿ ಮತ್ತು ಮನೆಯಿಂದ ಹೊರಗಡೆ ಅಲ್ಲಲ್ಲಿ ಒಡಾಡುತ್ತಿದ್ದು,ಆ.31ರಂದು ಒಮ್ಮಿಂದೊಮ್ಮೆಲೆ ಮನೆಯಿಂದ ಓಡಿಹೋದವನು ವಾಪಾಸ್ಸು ಮನೆಗೆ
ಬಾರದೇ ನಾಪತ್ತೆಯಾಗಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.


ಮೃತರ
ಸಂಬಂಧಿ ಹುಡುಕಾಡುತ್ತಿದ್ದಾಗ ಸೆ.2ರಂದು ಸಂಶುದ್ದೀನ್
ಎಂಬವರಿಗೆ ಸೇರಿದ ಅಡಿಕೆ ತೋಟದ ಕೆರೆ ನೀರಿನಲ್ಲಿ
ಶವವಾಗಿ ಪತ್ತೆಯಾಗಿರುವುದಾಗಿ ತಿಳಿದು ಬಂದಿದ್ದು, ಖಿನ್ನತೆಗೊಳಗಾಗಿ ಕೆರೆ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ
ಮೃತರ ಅಣ್ಣ ಶೀನಪ್ಪ ಎಂಬವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.


ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ ಯು.ಡಿ.ಆರ್ ನಂ. 29/2024
ಕಲಂ 194 ಬಿಎನ್‌ಎಸ್‌ಎಸ್. ಯಂತೆ ಪ್ರಕರಣ ದಾಖಲಾಗಿದೆ.