36.4 C
Kadaba
Sunday, March 16, 2025

ಹೊಸ ಸುದ್ದಿಗಳು

ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿ: ಹೆದ್ದಾರಿ ಬದಿಯಲ್ಲೇ ಅನಧಿಕೃತ ಕಟ್ಟಡ ನಿರ್ಮಾಣ: ಕಾಮಗಾರಿ ಸ್ಥಗಿತಗೊಳಿಸದಿದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆ

Must read

 ಕಡಬ
ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಳಾರದಲ್ಲಿ ಹೆದ್ದಾರಿ ಬದಿಯಲ್ಲೇ
 ಅನಧಿಕೃತ ಕಟ್ಟಡ ನಿರ್ಮಾಣವಾಗಿರುವ ಆರೋಪ ವ್ಯಕ್ತವಾಗಿದೆ.

kadabatimes.in


kadabatimes.in

ಉಪ್ಪಿನಂಗಡಿ-
ಸುಬ್ರಹ್ಮಣ್ಯ ಹೆದ್ದಾರಿ ಬದಿಯಲ್ಲಿ  ವ್ಯಕ್ತಿಯೊಬ್ಬರು
 ಕಟ್ಟಡ ನಿರ್ಮಾಣ ಮಾಡುತ್ತಿರುವ ಕುರಿತು  ದೂರಿನ ಮೇರೆಗೆ 
ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ  ಲೀಲಾವತಿಯವರು
ಸ್ಥಳಕ್ಕೆ ಭೇಟಿ ನೀಡಿದ್ದಾರೆ.   ಅಲ್ಲದೆ ಕೆಲಸ ನಿರ್ವಹಿಸುತ್ತಿದ್ದವರಿಗೆ
ಕೆಲಸ ಸ್ಥಗಿತಗೊಳಿಸುವಂತೆ  ಮೌಖಿಕವಾಗಿ ಸೂಚಿಸಿರುವುದಾಗಿ
ತಿಳಿದು ಬಂದಿದೆ.

kadabatimes.in


kadabatimes.in

ಈ ಬಗ್ಗೆ ಕರ್ನಾಟಕ ಭೀಮ್ ಆರ್ಮಿ ಭಾರತ್ ಏಕತಾ ಮಿಷನ್ ತಾಲೂಕು
ಅಧ್ಯಕ್ಷ ರಾಘವ ಅವರು ಪ.ಪಂ ಗೆ ದೂರು ನೀಡಿ
 ರಾಜ್ಯ
ಹೆದ್ದಾರಿ ಪಕ್ಷದಲ್ಲೇ  ಯಾವುದೇ
ಅನುಮತಿ ಪಡೆಯದೆ  ಕಟ್ಟಡ
ಕಟ್ಟುತ್ತಿದ್ದು ಕೂಡಲೇ ಸೂಕ್ತ ಕ್ರಮ
ಕೈಗೊಳ್ಳುವಂತೆ ದೂರಿನಲ್ಲಿ ಸೂಚಿಸಿದ್ದು, ಕಾಮಗಾರಿ ಸ್ಥಗಿತಗೊಳಿಸದಿದ್ದಲ್ಲಿ ಪ.ಪಂ ಮುಂದೆ ಪ್ರತಿಭಟನೆ
ಮಾಡಲಾಗುವುದು ಎಂದು ದೂರಿನಲ್ಲಿ ಎಚ್ಚರಿಸಿದ್ದಾರೆ.