28.5 C
Kadaba
Monday, March 17, 2025

ಹೊಸ ಸುದ್ದಿಗಳು

ಸುಬ್ರಹ್ಮಣ್ಯ: ಕಾಡಿನ ನಡುವೆ ಹಾದು ಹೋಗುವ ಸುಮಾರು 2 ಕಿಮೀ ಬಳ್ಪ-ಕಮಿಲ ರಸ್ತೆಯಲ್ಲಿ ಸ್ವಚ್ಚತೆ ಕೈಗೊಂಡ ಬಾಂಧವ್ಯ ಗೆಳೆಯರ ಬಳಗ

Must read

 

kadabatimes.in

kadabatimes.in

ಕುಕ್ಕೆ ಸುಬ್ರಹ್ಮಣ್ಯ: ಗುತ್ತಿಗಾರಿನ ಕಮಿಲದ ಬಾಂಧವ್ಯ ಗೆಳೆಯರ ಬಳಗವು ಬಳ್ಪಕಮಿಲ ರಸ್ತೆಯ ಸುಮಾರು 2 ಕಿಮೀ ಕಾಡಿನ ನಡುವೆ ಹಾದು ಹೋಗುವ ರಸ್ತೆಯ ಇಕ್ಕೆಲಗಳಲ್ಲಿ ಸ್ವತ್ಛತೆ ಕಾರ್ಯ ನಡೆಸಿ ಮಾದರಿ ಕಾರ್ಯ ಮಾಡಿ ಯುವ ಸಮುದಾಯಕ್ಕೆ ಸ್ಪೂರ್ತಿಯಾಗಿದ್ದಾರೆ.


kadabatimes.in

ಕಾಡಿನ
ದಾರಿಯಲ್ಲಿ 2 ಲೋಡ್ಪಿಕ್ಅಪ್ನಲ್ಲಿ ತುಂಬುವಷ್ಟು ತ್ಯಾಜ್ಯ ಸಿಕ್ಕಿದೆ. ಪರಿಸರ ಕಾಳಜಿಯಿಂದ ಕಾಡಿನ ದಾರಿ ಸ್ವತ್ಛಗೊಳಿಸಿದ ತಂಡ ಈಗ ಅಲ್ಲಲ್ಲಿ ಸ್ವತ್ಛತೆ
ಜಾಗೃತಿ ಫಲಕ ಅಳವಡಿಸಿದೆ. ಅರಣ್ಯ ಇಲಾಖೆ ಸಹಯೋಗದೊಂದಿಗೆ ಸಿಸಿ ಕೆಮರಾ ಅಳವಡಿಸಿ ಕಸ ಎಸೆಯುವವರ ಪತ್ತೆಗೂ
ಮುಂದಾಗಿದೆ.  ತ್ಯಾಜ್ಯ
ಎಸೆಯುವವರನ್ನು ಕಂಡರೆ ತಕ್ಷಣವೇ ಫೋಟೋ ಸಹಿತ ಇಲಾಖೆಗಳಿಗೆ ಮಾಹಿತಿ ನೀಡಲು ಅದು ಕ್ರಮ ಕೈಗೊಂಡಿದೆ.


ಕಾಡಿನ
ದಾರಿಯಲ್ಲಿ ಎಲ್ಲೆಂದ ರಲ್ಲಿ ಕಸ ಎಸೆದು ಹೋಗುತ್ತಾರೆ.
ವಿಷಪೂರಿತ ಹಾವುಗಳನ್ನು ರಸ್ತೆ ಬದಿಯೇ ಬಿಟ್ಟು ಹೋಗುತ್ತಾರೆ. ರಸ್ತೆಯಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲರೂ ನಡೆದಾಡುವ ಪ್ರದೇಶ ಇದು. ಹೀಗಾಗಿ ಸ್ವಚ್ಛತೆಯನ್ನು ಕಾಪಾಡಬೇಕು ಎಂಬ ಬಗ್ಗೆ ಜಾಗೃತಿ ಮೂಡಿಸಲು ಕ್ರಮ ಕೈಗೊಂಡಿದ್ದೇವೆ. ಮುಂದೆ ಪ್ರದೇಶದಲ್ಲಿ ನಮ್ಮ
ಯುವಕರೂ ತ್ಯಾಜ್ಯ ಎಸೆಯುವಿಕೆ ಮೇಲೆ ಕಣ್ಣಿಡಲಿದ್ದಾರೆ ಎನ್ನುತ್ತಾರೆ ಬಾಂಧವ್ಯ
ಗೆಳೆಯರ ಬಳಗದ ಅಧ್ಯಕ್ಷ  ತುಂಗನಾಥ ಕಾಯನಕೋಡಿ
ಅವರು.

kadabatimes.in

ಬಾಂಧವ್ಯ ಗೆಳೆಯರ ಬಳಗದ ಅಧ್ಯಕ್ಷ ತುಂಗನಾಥ ಕಾಯನಕೋಡಿಕಾರ್ಯದರ್ಶಿ ಹರ್ಷಿತ್‌ ಕಾಂತಿಲಸದಸ್ಯರಾದ ಚೇತನ್‌ ಕಾಂತಿಲಪವನ್‌ ಕಾಂತಿಲನಿತ್ಯಾನಂದ ಅಂಬೆಕಲ್ಲು ಕಮಿಲವಿನಯಚಂದ್ರ ಕಾಂತಿಲಉದಯಕುಮಾರ್‌ ಕಾಂತಿಲಭರತ್‌ ಕಾಂತಿಲಕುಸುಮಾಧರ ಕಾಂತಿಲತನ್ವಿತ್‌, ನಿರಂಜನ ಕಾಂತಿಲಪ್ರಣಾಮ್‌, ಜಯಪ್ರಕಾಶ್‌ ಕಾಂತಿಲವೆಂಕಟ್ರಮಣ ಮೊದಲಾದವರು ಸೇವಾ ಕಾರ್ಯದ ಮುಂಚೂಣಿಯಲ್ಲಿದ್ದಾರೆಸ್ಥಳೀಯ ಮುಖಂಡರು ಬೆಂಬಲ ನೀಡಿದ್ದಾರೆ.