33.3 C
Kadaba
Saturday, March 15, 2025

ಹೊಸ ಸುದ್ದಿಗಳು

ಕೊಕ್ಕಡ ಪರಿಸರದಲ್ಲಿ ಭೀಕರ ಸುಂಟರ ಗಾಳಿ: ಹಾರಿ ಹೋಯ್ತು ಹಲವು ಮನೆಗಳ ಹಂಚು, ಶೀಟ್

Must read

ಕೊಕ್ಕಡ/ನೆಲ್ಯಾಡಿ : ಇಲ್ಲಿನ  ಕೊಕ್ಕಡ ಪರಿಸರದ ಉಪ್ಪಾರಹಳ್ಳದಲ್ಲಿ ಭಾನುವಾರ ದಿಢೀರನೇ  ಎದ್ದ ಸುಳಿಗಾಳಿಗೆ ಹಲವಾರು ಅಡಿಕೆ ಮರಗಳು, ಮನೆಗಳ ಶೀಟು, ಹಂಚುಗಳು ಹಾರಿ ಹೋಗಿ ಜನರ ಆತಂಕಕ್ಕೆ ಕಾರಣವಾದ ಘಟನೆ ವರದಿಯಾಗಿದೆ.
ಗೋಳಿತೊಟ್ಟು ಬಳಿಯ ಕೋಡಿಂಗೇರಿ ಪ್ರದೇಶದ ಉಪ್ಪಾರಹಳ್ಳದಲ್ಲಿ  ಎದ್ದ ಸುಳಿಗಾಳಿಗೆ ಕೃಷಿಕರೊಬ್ಬರ ಬರೋಬ್ಬರಿ  120 ಅಡಿಕೆ ಮರಗಳು ಉರುಳಿ ಬಿದ್ದಿದೆ. ಅಲ್ಲದೆ  ಕೊಕ್ಕಡ ಪ್ರದೇಶದ ಅನೇಕ ಕೃಷಿಕರ ಅಡಿಕೆ ತೋಟಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.
ಕೋಡಿಂಗೇರಿ ರತ್ನಾವತಿ ಕೃಷ್ಣಪ್ಪ ಗೌಡ ಅವರ ಮನೆಯ ಹಂಚು ಹಾಗೂ ಶೀಟ್ ಸಂಪೂರ್ಣ ಹಾರಿಹೋಗಿ ಹಾನಿಯಾಗಿದೆ. ಪಿಜಿನಡ್ಕ ಕಾಲೋನಿಯ ಒಂದಿಬ್ಬರ ಮನೆಯ ಶೀಟುಗಳು ಹಾರಿ ಹೋಗಿದೆ.  
ಸುಳಿಗಾಳಿಯ ಭೀಕರತೆಯನ್ನು ಕಣ್ಣಾರೆ ಕಂಡ ಗ್ರಾಮದ ನಿವಾಸಿ ಶಿವಪ್ಪ ಗೌಡ ಎಂಬವರು   ಅವರು ತನ್ನ ಗುಡ್ಡದಲ್ಲಿರುವ  ತೋಟದ ತೆಂಗಿನ ಮರಗಳಿಗೆ ಗೊಬ್ಬರ ಹಾಕುತ್ತಿದ್ದು, ಆ ಸಂಧರ್ಭ ವಿಪರೀತಶಬ್ದ ಕೇಳಿದೆ.  ಶಬ್ದ ಬರುವ ಕಡೆ ನೋಡಿದಾಗ ಗಿಡಗಳು ತುಂಡಾಗುವ ಶಬ್ದ ಕೇಳಿ ಬರುತ್ತಿದ್ದು ಇದು ವಿಮಾನವೇ ಬಿದ್ದಿದೆ ಎಂದು ಕೆಳಗಡೆ ಓಡಿ ಬಂದಿದ್ದಾರೆ. ಅಡಿಕೆ ಸೋಗೆಗಳು ಬಹಳಷ್ಟು ಎತ್ತರದಲ್ಲಿ ಹಾರಾಡುವುದು ಕಂಡಿರುವುದಾಗಿ ಸ್ಥಳೀಯ ಮಾದ್ಯಮವೊಂದಕ್ಕೆ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಕಂದಾಯ, ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿರುವುದಾಗಿ ತಿಳಿದು ಬಂದಿದೆ.