33.3 C
Kadaba
Saturday, March 15, 2025

ಹೊಸ ಸುದ್ದಿಗಳು

ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರ E -KYC ಗೆ ಆಗಸ್ಟ್ 31 ಡೆಡ್ ಲೈನ್

Must read

 ಕಡಬ ಟೈಮ್: ಪಡಿತರ
ಚೀಟಿದಾರರು ಪ್ರತೀ ತಿಂಗಳು ಪಡಿತರ ಪಡೆಯುವುದಲ್ಲದೆ ಅನ್ನ ಭಾಗ್ಯ ನೇರ ನಗದು ವರ್ಗಾವಣೆಯ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಸರಕಾರವು ಕಳೆದ 5 ವರ್ಷಗಳಿಂದ ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರ ಕೆವೈಸಿ ಮಾಡಿಸುವಂತೆ
ನಿರ್ದೇಶನ ನೀಡಿದ್ದರೂ ಕೆಲವೊಂದು ಪಡಿತರ ಚೀಟಿ ಸದಸ್ಯರು ಇನ್ನೂ ಕೆವೈಸಿ ಮಾಡದೇ
ಇರುವುದು ಕಂಡುಬರುತ್ತಿದೆ.

kadabatimes.in


kadabatimes.in

ಪ್ರಸ್ತುತ
ಸರಕಾರವು ಯಾವುದೇ ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಲ್ಲಿ ಕೆವೈಸಿ ಮಾಡಲೂ
ಕೂಡಾ ಅವಕಾಶ ಕಲ್ಪಿಸಿರುತ್ತದೆ. ಜೀವಮಾಪನ ನೀಡಿ ಕೆವೈಸಿ ಮಾಡಿಸಲು
ಬಾಕಿ ಇರುವ ಸದಸ್ಯರು ಕೂಡಲೇ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಕೆವೈಸಿ ಮಾಡುವುದು.
ಸರಕಾರವು .31 ರವರೆಗೆ ಅವಕಾಶ ಕಲ್ಪಿಸಿದ್ದು ತಪ್ಪದೆ ಕೆವೈಸಿ ಮಾಡಿಸುವಂತೆ
ಜಿಲ್ಲಾಧಿಕಾರಿ ತಿಳಿಸಿದ್ದಾರೆ.


kadabatimes.in

ವಲಸೆ
ಹೋಗಿ ಅಥವಾ ಬೇರೆ ಜಿಲ್ಲೆಗಳಿಗೆ ಕೆಲಸ ನಿಮಿತ್ತ ತೆರಳಿರುವ ವ್ಯಕ್ತಿಗಳು ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಜೀವಮಾಪನ ನೀಡಬಹುದಾಗಿದ್ದು ಅವಕಾಶವನ್ನು ಸದುಪಯೋಗ
ಪಡಿಸಿ ಕೆವೈಸಿಯನ್ನು ಮಾಡುವಂತೆ
ತಿಳಿಸಿದೆ.


kadabatimes.in

ಇದು
ಪಡಿತರ ಚೀಟಿದಾರರಿಗೆ ಕೊನೆಯದಾಗಿ ತಿಳುವಳಿಕೆ ನೀಡುವುದಾಗಿದ್ದು .31 ನಂತರ ಕೆವೈಸಿ ಬಾಕಿಯಾಗಿರುವ ಪಡಿತರ ಚೀಟಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಇದುವರೆಗೆ ಕೆವೈಸಿ ಮಾಡಿಸದ
ಪಡಿತರ ಚೀಟಿದಾರರು ತಮ್ಮ ವಾಸ್ತವ್ಯಕ್ಕೆ ಸಮೀಪದ ನ್ಯಾಯಬೆಲೆ ಅಂಗಡಿಗಳಲ್ಲಿ ಕೂಡಲೇ ಕೆವೈಸಿ ಮಾಡಿಸಿ
ಕೊಳ್ಳಬೇಕು.