ಧರ್ಮಸ್ಥಳ
ಠಾಣಾ ವ್ಯಾಪ್ತಿಯ ಉಜಿರೆ ಸಮೀಪದ ಬೆಳಾಲಿನಲ್ಲಿ ನಿವೃತ್ತ
ಶಿಕ್ಷಕ ಎಸ್ ಪಿ ಬಾಲಕೃಷ್ಣ ಭಟ್(83) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸುಳಿವು ಪೊಲೀಸರಿಗೆ
ಸಿಕ್ಕಿದೆ.




ಆಸ್ತಿ
ವಿಚಾರಕ್ಕೆ ಸಂಬಂಧಿಸಿದಂತೆ ಈ ಕೊಲೆ ನಡೆದಿದೆ ಎನ್ನಲಾಗಿದ್ದು ಇಬ್ಬರನ್ನು ಪೊಲೀಸರು ಬಂಧಿಸಿರುವುದಾಗಿ
ಮಾಹಿತಿ ಲಭಿಸಿದೆ. ಇವರಿಬ್ಬರು ಮೃತ ಬಾಲಕೃಷ್ಣ ಭಟ್
ಅವರ ಕುಟುಂಬದ ಹತ್ತಿರದ ಸಂಬಂಧಿಗಳಾಗಿರುವ ಕೇರಳ ಕಾಸರಗೋಡಿನವರು ಎಂದು ಹೇಳಲಾಗುತ್ತಿದೆ.


ಒಬ್ಬ
ಆರೋಪಿ ಕೇರಳದಲ್ಲಿ ಈ ಹಿಂದೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಹಿನ್ನೆಲೆಯಿದೆ ಎಂದು ತಿಳಿದು
ಬಂದಿದೆ. ಅಪರಾಧ ಪ್ರಕರಣದಲ್ಲಿ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಈಗಾಗಲೇ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.


ಜಾಗ
ಹಂಚಿಕೆ ಮಾಡುವ ವಿಚಾರದಲ್ಲಿ ಈ ಕೃತ್ಯವನ್ನು ಎಸಗಿದ್ದಾರೆ ಎಂದು ಪೊಲೀಸ್ ತನಿಖೆಯಲ್ಲಿ
ಬಹಿರಂಗಗೊಂಡಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಆರೋಪಿಗಳ ಜಾಡು ಹಿಡಿದಿದ್ದು
ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನು ಕೊಲೆಯಲ್ಲಿ ಯಾರೆಲ್ಲ ಭಾಗಿಗಳಾಗಿದ್ದಾರೆ ಎಂಬ ಬಗ್ಗೆ ಇನ್ನಷ್ಟೇ
ಮಾಹಿತಿ ತಿಳಿದುಬರಬೇಕಾಗಿದೆ.