23.5 C
Kadaba
Saturday, March 15, 2025

ಹೊಸ ಸುದ್ದಿಗಳು

ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿ: ರಸ್ತೆ ಬದಿ ಕಸ ಎಸೆದ ಆಟೋ ಚಾಲಕನಿಗೆ 500 ರೂ ದಂಡ!

Must read

 ಕಡಬ:
ಹೆದ್ದಾರಿ ಬದಿ  ತ್ಯಾಜ್ಯ
ಎಸೆದು ಹೋದ   ಆಟೋ
ಚಾಲಕನಿಗೆ  ಕುಟ್ರುಪಾಡಿ
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಂಡ ವಿಧಿಸಿ ಎಚ್ಚರಿಕೆ ನೀಡಿದ ಘಟನೆ
ಶುಕ್ರವಾರ ನಡೆದಿದೆ.

kadabatimes.in


kadabatimes.in

ಆಟೋದಲ್ಲಿ
ಬಂದ ಉಪ್ಪಿನಂಗಡಿ ಮೂಲದ ಆಟೋ ಚಾಲಕ ಉಪ್ಪಿನಂಗಡಿಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕುಟ್ರುಪ್ಪಾಡಿ ಗ್ರಾ.ಪಂ. ವ್ಯಾಪ್ತಿಯ ಬಲ್ಯದಲ್ಲಿ ರಸ್ತೆಯ ಪಕ್ಕ ತ್ಯಾಜ್ಯ ಸುರಿಯುತ್ತಿದ್ದ ವೇಳೆ ಸ್ಥಳೀಯರು ಗಮನಿಸಿದ್ದಾರೆ  .


kadabatimes.in

ಜನರನ್ನು
ಕಂಡ ಆತ ತನ್ನ ಆಟೋ
ಚಲಾಯಿಸಿ ಹೋಗಲು ಮುಂದಾದ ವೇಳೆ  ಸಾರ್ವಜನಿಕರು ಆತನ ವಾಹನವನ್ನುಅಡ್ಡ
ಹಾಕಿ ಗ್ರಾಮ ಪಂಚಾಯತ್ ಕಚೇರಿಗೆ ಮಾಹಿತಿ ನೀಡಿದ್ದಾರೆ.


kadabatimes.in

ಸ್ಥಳಕ್ಕೆ
ಆಗಮಿಸಿದ ಪಿಡಿಒ ಆನಂದ ಗೌಡ ಅವರು ರಸ್ತೆಯ ಪಕ್ಕ ತ್ಯಾಜ್ಯ ಸುರಿದಾತನಿಗೆ 500 ರೂ ದಂಡವನ್ನು ವಿಧಿಸಿ, ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.