ಕಡಬ ಟೈಮ್ಸ್ : ಶಾಲಾ
ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಸರಸ್ವತಿ ಸಮೂಹ ವಿದ್ಯಾ ಸಂಸ್ಥೆಗಳ ಆಶ್ರಯದಲ್ಲಿ ಕಡಬ,ಪುತ್ತೂರು ತಾಲೂಕು
ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯು ವಿದ್ಯಾನಗರದಲ್ಲಿ
ಜರುಗಿತು




ಕಡಬ
ಉಪತಹಶೀಲ್ದಾರ್ ಗೋಪಾಲ ಕೆ ದೀಪ ಬೆಳಗಿಸಿ ಯೋಗ ಪಿತಾಮಹ ಪತಂಜಲಿ ಮುನಿಯವರ
ಭಾವಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸಿ ಉದ್ಘಾಟಿಸಿದರು.ಬಳಿಕ ಮಾತನಾಡಿ, ಆಧ್ಯಾತ್ಮಿಕ ಮಾನಸಿಕ
ದೈಹಿಕ ಶಾಂತಿ ಸಂಯಮಗಳನ್ನು ಕಾಯ್ದುಕೊಳ್ಳಲು ಸಾಧಿಸಲಾಗುವ ಉನ್ನತ ಜೀವನ ಶಿಕ್ಷಣವೇ ಯೋಗ ಎಂದರು.


ಮುಖ್ಯ
ಅತಿಥಿಯಾಗಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ
ಚಕ್ರಪಾಣಿ ಯವರು ಸ್ಪರ್ಧಾ ನಿಯಮಗಳನ್ನು ಸ್ಪರ್ದಾಳುಗಳಿಗೆ
ತಿಳಿಸಿದರು. ಅಧ್ಯಕ್ಷತೆವಹಿಸಿದ್ದ ಸರಸ್ವತಿ ಸಮೂಹ
ವಿದ್ಯಾಸಂಸ್ಥೆಗಳ ಸಂಚಾಲಕ ವೆಂಕಟರಮಣರಾವ್ ಮಂಕುಡೆ ಅವರು ಮಾತನಾಡಿ, ಯೋಗ ಸ್ಪರ್ಧೆಗಲ್ಲ ಅದನ್ನು ನಿತ್ಯ ನಿರಂತರ ಮಾಡಬೇಕು ಎಂದು
ಸಲಹೆ ನೀಡಿದರು.ಇದೇ ಸಂದರ್ಭದಲ್ಲಿ ಸಂಚಾಲಕರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ
ವಿವೇಕಾನಂದ ವಿದ್ಯಾವರ್ಧಕ ಸಂಘ ದ ನಿರ್ದೇಶಕ ಕೃಷ್ಣಶೆಟ್ಟಿ ಕಡಬ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ
ಅಧ್ಯಕ್ಷ ಬಾಲಕೃಷ್ಣ , ಸಂಘದ ಕಡಬ ತಾಲೂಕು ಅಧ್ಯಕ್ಷ ಬೇಬಿ , ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ
ಬಾಲಕೃಷ್ಣ, ತಾಲೂಕು ನೋಡಲ್ ಅಧಿಕಾರಿಗಳಾದ ಲೋಕೇಶ್
ಕಡಬ , , ಚಂದ್ರಶೇಖರ್ ಬಿಳಿನೆಲೆ, ಸಿ. ಆರ್. ಪಿ. ಗಣೇಶ್
, ಪ್ರಾಥಮಿಕ ವಿಭಾಗದ ಮುಖ್ಯ ಗುರುಗಳಾದ ಮಾಧವ
ಕೋಲ್ಪೆಪ್ರೌಢ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ
ಶೈಲಶ್ರೀ ಎಸ್ ರೈ, ಆಂಗ್ಲ ವಿಭಾಗದ ಮುಖ್ಯ ಶಿಕ್ಷಕಿ ಶ್ವೇತಾ ಉಪಸ್ಥಿತರಿದ್ದರು.

