ಸವಣೂರು:
ಬಸ್ ನಿಲ್ಲಿಸಿಲ್ಲವೆಂದು
ಗುತ್ತಿಗೆ ಆಧಾರದಲ್ಲಿ ನೇಮಕವಾದ ಬಸ್
ಚಾಲಕನಿಗೆ ಕೆಎಸ್ಆರ್
ಟಿಸಿ ಸಿಬ್ಬಂದಿಯೇ ಹಲ್ಲೆ ನಡೆಸಿದ ಘಟನೆ ಕಡಬ ತಾಲೂಕಿನ ಸವಣೂರಿನಲ್ಲಿ ನಡೆದಿದೆ.




ಸವಣೂರು
ವಿದ್ಯಾರಶ್ಮಿ ವಿದ್ಯಾಸಂಸ್ಥೆಯ ಬಸ್ ನಿಲ್ದಾಣದಲ್ಲಿ ನಿಂತಿದ್ದ ಕೆಎಸ್ ಆರ್ ಟಿಸಿ ಅಧಿಕಾರಿ ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬರು ಬಸ್ ನಿಲ್ದಾಣ ಸಮೀಪ ನಿಲ್ಲಿಸಿಲ್ಲವೆಂದು ಆರೋಪಿಸಿ ಚಾಲಕ ಭರತ್ ಎಂಬವರಿಗೆ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದ್ದು ಬಸ್ ಚಾಲಕ ಬೆಳ್ಳಾರೆ ಪೊಲೀಸರಿಗೆ ದೂರು ನೀಡಿದ್ದಾರೆ


ಬಸ್
ಕೆಲವು ಮೀಟರ್ ದೂರದಲ್ಲಿ ನಿಲ್ಲಿಸಿದಾಗ ಬಸ್ ಗೆ ಹತ್ತಿದ ಅಧಿಕಾರಿ ಚಾಲಕನಿಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಕೂಡಲೇ ಚಾಲಕ ಬಸ್ ನಿಲ್ಲಿಸಿ ಬಸ್ ನಿಂದ ಇಳಿದಿದ್ದಾರೆ.ಬಸ್ ನಲ್ಲಿದ್ದ ಸಹಪ್ರಯಾಣಿಕರು ಘಟನೆಯ ವಿಡಿಯೋ ಚಿತ್ರೀಕರಣ ಮಾಡಿದ್ದು, ಅಧಿಕಾರಿ ಎಂದು ಹೇಳಿಕೊಂಡಿರುವ ವ್ಯಕ್ತಿ ಚಾಲಕನನ್ನು ಪ್ರಶ್ನಿಸುವ ದೃಶ್ಯವಿದೆ.
ಚಾಲಕ
ಭರತ್ ಒಂದು ವರ್ಷದ ಹಿಂದೆಯಷ್ಟೇ ಗುತ್ತಿಗೆ ಆಧಾರದಲ್ಲಿ ಉದ್ಯೋಗ ಪಡೆದಿದ್ದರು.ಹಲ್ಲೆಗೊಳಗಾದ ಚಾಲಕ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಆಸ್ಪತ್ರೆಗೆ ಬಂದ ಅಧಿಕಾರಿ ಎಂದಿರುವ ವ್ಯಕ್ತಿ ಭರತ್ ಜೊತೆ ಮಾತಿನ ಚಕಮಕಿ ನಡೆಸುವ ವಿಡಿಯೋ ಕೂಡ ವೈರಲ್ ಆಗಿದೆ. ಬಸ್
ಗೆ ಕೈ ಹಿಡಿಯದಿದ್ದರೆ, ಯುನಿಫಾರ್ಮ್
ನಲ್ಲಿಲ್ಲದಿದ್ದರೆ ಹೇಗೆ ನಾನು ಬಸ್ ನಿಲ್ಲಿಸುವುದು ಎಂದು ಭರತ್ ಅಧಿಕಾರಿಗಳನ್ನು ಪ್ರಶ್ನಿಸುತ್ತಿರುವುದು ವೀಡಿಯೋದಲ್ಲಿದೆ.