23.5 C
Kadaba
Saturday, March 15, 2025

ಹೊಸ ಸುದ್ದಿಗಳು

ಕಸಿ ಕಟ್ಟುವುದರಲ್ಲಿ ವಿಶೇಷ ಆಸಕ್ತಿ ತೋರಿದ ಹತ್ತರ ಪೋರ:ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್.

Must read

 ಕಡಬ ಟೈಮ್ಸ್ : ಹತ್ತನೇ
ತರಗತಿ ಓದುತ್ತಿರುವ ಬಾಲಕನೊಬ್ಬ ಓದಿನ ಜೊತೆಗೆ ಕಸಿ
ಕಟ್ಟು (ಗ್ರಾಫ್ಟಿಂಗ್)ವುದರಲ್ಲಿ ವಿಶೇಷ ಆಸಕ್ತಿ ಬೆಳೆಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ.

kadabatimes.in


kadabatimes.in

ದಕ್ಷಿಣ
ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪ್ರಗತಿಪರ ಕೃಷಿಕ ಅನಿಲ್ ಬಳಂಜ ಮತ್ತು ಶೈಲಜ ಬಳಂಜ ದಂಪತಿಗಳ ಪುತ್ರ ಆದ್ಯ ಶರ್ಮಾ ಕೃಷಿ ಕೆಲಸ ಮಾಡುವುದರಲ್ಲಿ ಬಲು ಪ್ರೀತಿ ತೋರಿದ ಬಾಲಕ. ಈತ  ಕಸಿ ಕಟ್ಟುವ
ವಿಧಾನವನ್ನು ಹೇಳಿಕೊಡುವ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.


ತಮ್ಮ
ಎಂಟನೇ ವಯಸ್ಸಿಗೆ ಕಸಿ ಕಟ್ಟುವುದನ್ನು ಕಲಿತ ಆದ್ಯ ಅವರು, ಎರಡು ವರ್ಷಗಳಿಂದ ಕಸಿ ಕಟ್ಟುತ್ತಿದ್ದಾರೆ. ತನ್ನ ತಂದೆ ಕಸಿಕಟ್ಟುವ ಕಲೆಯನ್ನು ತಾನೂ ಕರಗತಮಾಡಿಕೊಂಡಿರುವುದು
ವಿಶೇಷ .  ಎಳೆಯ
ವಯಸ್ಸಿನಲ್ಲಿಯೇ ಕೃಷಿಯ ವಿಚಾರದಲ್ಲಿ ಆದ್ಯ ಶರ್ಮಾ ಅವರು ತೋರಿಸುವ ಅಪಾರ ಆಸಕ್ತಿ ಇತರರಿಗೆ ಸ್ಪೂರ್ತಿದಾಯಕವಾಗಿದೆ


kadabatimes.in

ಉಜಿರೆಯ
ಎಸ್ ಡಿ ಎಂ ಆಂಗ್ಲ
ಮಾಧ್ಯಮ ಶಾಲೆಯಲ್ಲಿ ಓದುತ್ತಿರುವ, ಆದ್ಯ ಶರ್ಮಾ ಬಿಡುವಿನ ವೇಳೆಯಲ್ಲಿ ತಮ್ಮ ತಂದೆಯ  ನರ್ಸರಿಯಲ್ಲಿ
ಸಮಯ ಕಳೆಯುತ್ತಾರೆ. ನರ್ಸರಿಯೊಳಗೆ ಕೈಗಾಡಿ ಚಲಾಯಿಸುವ ಅವರ ಕೃಷಿಯ ಆಸಕ್ತಿಯೂ  ಗಮನಾರ್ಹವಾಗಿದೆ.

 

ಅನಿಲ್
ಬಳಂಜ ಅವರ ನರ್ಸರಿ ವಿಶೇಷ ಗಿಡಗಳಿಗೆ ಹೆಸರುವಾಸಿ. ದೇಶ ವಿದೇಶಗಳಿಂದ ಗಿಡಗಳನ್ನು ತರಿಸುವ ಅವರು, ಕಸಿ ಕಟ್ಟಿ ಗಿಡ ಅಭಿವೃದ್ದಿಪಡಿಸಿ ಸ್ಥಳೀಯ ಮಾರುಕಟ್ಟೆಯನ್ನು ಕಟ್ಟಿಕೊಂಡಿದ್ದಾರೆ. ಅನಿಲ್ ಬಳಂಜ ಹೊರಗಡೆ ಹೋದರೆ, ಅವರ ನರ್ಸರಿಗೆ ಗ್ರಾಹಕರು ಬಂದರೆ ಅವರಿಗೆ ಬೇಕಾದ ಗಿಡಗಳನ್ನು ಆದ್ಯ ಶರ್ಮಾ ಅವರೇ ಕೊಡುತ್ತಾರೆ. ನರ್ಸರಿಯಲ್ಲಿರುವ 800 ಜಾತಿಯ ಎಲ್ಲಾ ಗಿಡಗಳ ಹೆಸರೂ ಆದ್ಯ ಅವರಿಗೆ ಗೊತ್ತಿದೆ.

kadabatimes.in