ಕಡಬ ಟೈಮ್: ಸುಳ್ಯದ ಸಂಪಾಜೆ ಗ್ರಾಮದ ದೊಡ್ಡಡ್ಕ
ಸಮೀಪ ಕಾರೊಂದು ನಿಯಂತ್ರಣ ತಪ್ಪಿ ರಬ್ಬರ್ ತೋಟಕ್ಕೆ ಪಲ್ಟಿಯಾಗಿದ್ದು,
ಗಂಭೀರ ಗಾಯಗೊಂಡ ಕಾರು ಚಾಲಕ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ
ಮೃತಪಟ್ಟಿದ್ದಾರೆ.






ವಿರಾಜಪೇಟೆಯ
ಗಣೇಶ್ ಎಂಬವರು ಮೃತಪಟ್ಟವರು. ತಮ್ಮ ಪುತ್ರನನ್ನು
ಮಂಗಳೂರಿನ ಏರ್‌ಪೋರ್ಟ್‌ಗೆ ಬಿಟ್ಟು ಬರುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದ್ದು, ಅಪಘಾತದ
ಪರಿಣಾಮ ಗಣೇಶ್ ರವರಿಗೆ ಎದೆಗೆ ಗಂಭೀರ ಗಾಯವಾಗಿತ್ತು.


ಕೂಡಲೇ
ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರೆಂದು
ತಿಳಿದುಬಂದಿದೆ. ಕಾರಿನಲ್ಲಿದ್ದ ಮಗಳು ಅಳಿಯ ಮತ್ತು ಇನ್ನೋರ್ವ ಪ್ರಯಾಣಿಕರಿಗೆ ಯಾವುದೇ ಅಪಾಯ ಸಂಭವಿಸಿಲ್ಲ
ಎಂದು ತಿಳಿದು ಬಂದಿದೆ.