25.1 C
Kadaba
Saturday, March 15, 2025

ಹೊಸ ಸುದ್ದಿಗಳು

ಖಾಲಿ ಪುಸ್ತಕ ಇಟ್ಟು ಏನು ಮಾಡುತ್ತೀರಿ?:ಕಡಬದಲ್ಲಿಅಧಿಕಾರಿ, ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡ ಲೋಕಾಯುಕ್ತ ಪೊಲೀಸ್

Must read

 ಕಡಬ ಟೈಮ್:  ಕಡಬದಲ್ಲಿ
ಲೋಕಾಯುಕ್ತ ಸಾರ್ವಜನಿಕ ಜನಸಂಪರ್ಕ ಸಭೆಯ ಬಳಿಕ
 ತಾಲೂಕು
ಆಡಳಿತ ಸೌಧದ ಪ್ರತಿ ಇಲಾಖಾ ಕಚೇರಿಗೆ ಭೇಟಿ ನೀಡಿದ ಲೋಕಾಯುಕ್ತ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ
ನಟರಾಜ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

kadabatimes.in

kadabatimes.in


kadabatimes.in

ಸಿಬ್ಬಂದಿಗಳ
ಕ್ಯಾಶ್ ರಿಜಿಸ್ಟರ್ ಯಾಕೆ ಮಾಡುತ್ತಿಲ್ಲ,  ಖಾಲಿ ಪುಸ್ತಕ
ಇಟ್ಟು ಏನು ಮಾಡುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು.  ಬೆಳಗ್ಗೆ ಸಿಬ್ಬಂದಿ ಬರುವಾಗ ಅವರಲ್ಲಿ ಎಷ್ಟು ಕ್ಯಾಶ್ ಇದೆ
ಎನ್ನುವುದನ್ನು ದಾಖಲಿಸಬೇಕು. ಸಂಜೆ ಕಚೇರಿಯಿಂದ ಹೊರ ಹೋಗುವಾಗ ಪರಿಶೀಲಿಸಬೇಕು ಎಂದು ತಹಸೀಲ್ದಾರ್
ಅವರಿಗೆ ಸೂಚಿಸಿ ದರು. ಬಿಪಿಎಲ್ ಪಡಿತರ ಚೀಟಿಯನ್ನು ಅನರ್ಹಗೊಳಿಸುವಾಗ ಬಡವರಿಗೆ ಅನ್ಯಾಯವಾಗದಂತೆ
ನೋಡಿಕೊಳ್ಳಬೇಕು. ಜನನ ಮರಣ ಪ್ರಮಾಣ ಪತ್ರ ನೀಡುವುದನ್ನು ವಿನಾಕಾರಣ ವಿಳಂಬ ಮಾಡಬಾರದು ಎಂದು ಅಧಿ
ಕಾರಿಗಳಿಗೆ ಸೂಚನೆ ನೀಡಿದರು.

ಕಡಬ
ಆಡಳಿತ ಸೌಧದಲ್ಲಿ  ನಡೆದ ಸಭೆಯ ಸಾರಾಂಶ :

kadabatimes.in

  • ತಿಂಗಳಿಗೊಮ್ಮೆ
    ಜಿಲ್ಲೆಯ ಪ್ರತಿ ತಾಲೂಕು ಕೇಂದ್ರಗಳಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಲು ನಿರ್ಧರಿಸಲಾಗಿದ್ದು,
    ಸಭೆಯಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ಪರಿಹಾರ ನೀಡುವ ಕಾರ್ಯ
  • ಏಳು ತಿಂಗಳ ಹಿಂದೆ ಕಡಬದಲ್ಲಿ ಸಾರ್ವಜನಿಕರ ಜನಸಂಪರ್ಕ ಸಭೆಯಲ್ಲಿ
    ಬಂದಿರುವ ಬಹುತೇಕ ಅರ್ಜಿಗಳ ಸಮಸ್ಯೆಗಳನ್ನು ಪರಿಹರಿಸಿದ್ದೇವೆ.
  • ಬುಧವಾರ
    ಕಡಬದಲ್ಲಿ ನಡೆದ ಸಭೆಯಲ್ಲಿ ಹದಿನಾರು ಅರ್ಜಿಗಳು ಬಂದಿದ್ದು, ಬಹುತೇಕ ದೂರುಗಳು ಕಂದಾಯ ಇಲಾಖೆಗೆ ಸಂಬಂಧಪಟ್ಟಿವೆ.
    ಸರ್ವೆ, ಪೋಡಿ, ಪ್ಲಾಟಿಂಗ್ ಸಮಸ್ಯೆಗಳನ್ನು ಸ್ಥಳೀಯವಾಗಿ ಪರಿಹರಿಸಲು ಸಂಬಂಧಪಟ್ಟ ಅಧಿ ಅಧಿಕಾರಿಗಳಿಗೆ
    ಸೂಚನೆ ನೀಡಲಾಗಿದೆ.
  •  ಉಳಿದಂತೆ
    ಒಂಬತ್ತು ಪ್ರಕರಣಗಳಲ್ಲಿ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿ ಕೊಂಡು ಅಲ್ಲಿ ವಿಚಾರಣೆ ಮಾಡುವ ಪ್ರಕ್ರಿಯೆ
    ಮಾಡಲಾಗುವುದು.
  • ಸಾರ್ವಜನಿಕರು
    ಸಮಸ್ಯೆಗಳ ಬಗ್ಗೆ ದೂರು ನೀಡಬಹುದು. ಒಂದು ವೇಳೆ ಸಮಸ್ಯೆ ಪರಿಹಾರವಾಗದಿದ್ದಲ್ಲಿ ಮತ್ತೊಮ್ಮೆ ಮನವಿ
    ಮಾಡಲಾಗುವುದು.
  •   ಲೋಕಯುಕ್ತ
    ಅಧಿಕಾರಿಗಳಾದ ಸಿ.ಎನ್.ಚಂದ್ರಶೇಖರ್ ಹಾಗೂ ಅಮಾನುಲ್ಲಾ ಅವರು ಸಾರ್ವಜನಿಕರ ದೂರು ಅರ್ಜಿಗಳನ್ನು ದಾಖಲಿಸಿಕೊಂಡು
    ಪರಿಹಾರ ಸೂಚಿಸಿದರು.
  •  ಕಡಬ
    ತಹಸೀಲ್ದಾರ್ ಪ್ರಭಾಕರ ಖಜೂರೆ, ಕಡಬ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೀಲಾವತಿ, ತಾಲೂಕು ಪಂಚಾಯಿತಿ
    ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ ಕಜೆಮೂಲೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.