ಕಡಬಟೈಮ್ : ಸಂಪೂರ್ಣ ಶಿಥಿಲಗೊಂಡಿರುವ ಕಡಬದ ಪ್ರವಾಸಿ ಬಂಗಲೆ ಅಕ್ರಮ ಚಟುವಟಿಕೆಯ ತಾಣವಾಗಿ ಬದಲಾಗಿದೆ.
ಇಲ್ಲಿ ನಿತ್ಯ ಅಂದರ್ ಬಾಹರ್ ಆಡುತ್ತಿದ್ದು ಮಂಗಳವಾರ
ಪೊಲೀಸರು ಬರುತ್ತಿದ್ದಂತೆ ಎಸ್ಕೇಪ್ ಆಗಿರುವ ವಿಚಾರ ಬೆಳಕಿಗೆ ಬಂದಿದೆ.




ಪೊಲೀಸರು
ಕಂಡೊಡನೆ ಇಸ್ಪೆಟ್ ಆಟದಲ್ಲಿ ನಿರತರಾಗಿದ್ದವರು ಚದುರಿ ಓಡಿಹೋಗಿ ತಪ್ಪಿಸಿಕೊಂಡಿದ್ದಾರೆ ಎಂದು ತಿಳಿದು
ಬಂದಿದೆ. ಸಾರ್ವಜನಿಕರ ಮಾಹಿತಿ ಪ್ರಕಾರ ಬಂಗಲೆ ಒಳಗೆ
ನಿತ್ಯ ಜನರು ಸೇರುತ್ತಿದ್ದು ಯಾವ ಉದ್ದೇಶಕ್ಕೆ ಸೇರುತ್ತಿದ್ದಾರೆ
ಎಂದು ತಿಳಿಯುತ್ತಿಲ್ಲ.ಪಕ್ಕದಲ್ಲಿ ಬಾರ್ ಗಳು ಇರುವ ಕಾರಣ ಮದ್ಯ ವ್ಯಸನಿಗಳೂ ಇಲ್ಲಿ ಬರುತ್ತಿದ್ದಾರೆ.
ಆಸ್ಪತ್ರೆ
,ಬ್ಯಾಂಕ್,ಆಟೋ ನಿಲ್ದಾಣ,ವಾಣಿಜ್ಯ ಮಳಿಗೆ ಸೇರಿದಂತೆ ಸಾರ್ವಜನಿಕರು ಓಡಾಡುವ ಸ್ಥಳದಲ್ಲೇ ಅಕ್ರಮ ಚಟುವಟಿಕೆಗಳ
ತಾಣವಾಗಿರುವ ಈ ಬಂಗಲೆ ಇದ್ದು ಅಧಿಕಾರಿಗಳ
ನಿರ್ಲಕ್ಷ್ಯದಿಂದ ಇನ್ನೂ ತೆರವಾಗಿಲ್ಲ ಇಲ್ಲವೆ ಬೇರೆ ಯಾವುದಾದರೂ ಇಲಾಖೆ ಕಾರ್ಯನಿರ್ವಹಿಸಲು ಯೋಗ್ಯವನ್ನಾಗಿ
ಮಾಡಿದಲ್ಲಿ ಜನರಿಗೆ ಅನುಕೂಲವಾಗಲಿದೆ ಎನ್ನುತ್ತಾರೆ
ಸಾರ್ವಜನಿಕರು.


ಇದೇ
ಬಂಗಲೆಯಲ್ಲಿ ವರ್ಷಗಳ ಹಿಂದೆ ವ್ಯಕ್ತಿಯೊಬ್ಬರು ವಾಸವಾಗಿ ಬಳಿಕ ಶವವಾಗಿ ಪತ್ತೆಯಾಗಿದ್ದರು. ಉಪಯೋಗವಿಲ್ಲದೆ
ಪಾಳುಬಿದ್ದಿರುವ ಈ ಕಟ್ಟಡ ಈಗ
ಭೂತ ಬಂಗಲೆ ಯಂತೆ ಕಂಡುಬರುತ್ತಿದೆ. ಆವರಣ
ಗೋಡೆ ಕುಸಿದುಬಿದ್ದಿರುವ ಈ ಪ್ರದೇಶವನ್ನು ಸಾರ್ವಜನಿಕರು
ತಮ್ಮ ದೇಹಬಾಧೆ ತೀರಿಸಿಕೊಳ್ಳಲು ಉಪಯೋಗಿಸುತ್ತಿರುವುದರಿಂದಾಗಿ ಈ
ಪರಿಸರ ಬಯಲು ಶೌಚಾಲಯವಾಗಿ ಮಾರ್ಪಟ್ಟಿದೆ.
ಗಬ್ಬು ನಾರುತ್ತಿರುವ ಹಾಸಿಗೆಗಳು, ಪೀಠೊಪಕ ರಣಗಳು, ಸೋಫಾಗಳು, ಅಸಹ್ಯ ಉಂಟು ಮಾಡುವ ಶೌಚಾಲಯಗಳು, ಜೇಡರ ಬಲೆ, ಬಿರುಕು ಬಿಟ್ಟಿರುವ ಗೋಡೆಗಳು, ವಿದ್ಯುತ್ ಉಪಕರಣಗಳು ಸ್ತಬ್ದಗೊಂಡಿದೆ.
ಪೇಟೆಯ
ಹೃದಯ ಭಾಗದಲ್ಲಿರುವ ಈ ಕಟ್ಟಡದಲ್ಲಿ ಯಾವುದಾದರೊಂದು
ಪ್ರಮುಖ ಇಲಾಖೆಯ ಕಚೇರಿ ತೆರೆಯುವ ಅವಕಾಶವಿದೆ. ಈ ಕಟ್ಟಡವನ್ನು ದುರಸ್ತಿಗೊಳಿಸಿ
ತಾಲೂಕು ಮಟ್ಟದ ಯಾವುದಾದರೂ ಸರಕಾರಿ ಕಚೇರಿಗೆ ಬಳಸಿಕೊಳ್ಳುವ ಉದ್ದೇಶದಿಂದ ಈ ಹಿಂದೆ ಸ್ಥಳೀಯ ಜಿ.ಪಂ. ಸದಸ್ಯರ
ಪ್ರಯತ್ನದಿಂದ 5 ಲಕ್ಷ ರೂ.ಗಳ ಅಂದಾಜು
ಪಟ್ಟಿ ತಯಾರಿಸಲಾಗಿತ್ತು. ಆದರೆ ಕಟ್ಟಡ ಸಂಪೂರ್ಣವಾಗಿ ಶಿಥಿಲಗೊಂಡು ಗೋಡೆಗಳು ಅಲ್ಲಲ್ಲಿ ಕುಸಿದಿರುವುದರಿಂದ ದುರಸ್ತಿಗೊಳಿಸಿ ಉಪಯೋಗಿಸಲು ಅಸಾಧ್ಯ ಎನ್ನುವ ನೆಲೆಯಲ್ಲಿ ಪ್ರಸ್ತಾವನೆಯೂ ತಿರಸ್ಕೃತಗೊಂಡಿದೆ.

