25.1 C
Kadaba
Friday, March 14, 2025

ಹೊಸ ಸುದ್ದಿಗಳು

Big update today: ಕಾಂಗ್ರೆಸ್​ ಪ್ರತಿಭಟನೆ ಬೆನ್ನಲ್ಲೇ ರಾಜ್ಯಪಾಲರಿಗೆ Z ಕೆಟಗರಿಯ ಸೆಕ್ಯೂರಿಟಿ, ಬುಲೆಟ್ ಪ್ರೂಫ್​ ಕಾರು

Must read

 ಕಡಬ ಟೈಮ್: ಮುಡಾ
ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ
ನೀಡಿದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ರಾಜ್ಯಾದ್ಯಂತ ರಾಜ್ಯಪಾಲ ಥಾವರ್
ಚಂದ್ ಗೆಹ್ಲೋಟ್ ಅವರ ವಿರುದ್ಧ ಪ್ರತಿಭಟನೆ ನಡೆಸಿದ್ದರು.

kadabatimes.in


kadabatimes.in

ಇದೀಗ
ಇದರ ಬೆನ್ನಲ್ಲೇ ಕೇಂದ್ರ ಗುಪ್ತಚರ ಇಲಾಖೆಯು ರಾಜ್ಯಪಾಲರಿಗೆ Z ಕೆಟಗರಿ ಸೆಕ್ಯೂರಿಟಿ ನೀಡಿದೆ. ಜೊತೆಗೆ
ಬುಲೆಟ್ ಪ್ರೂಫ್ ಕಾರು ತರಿಸಿಕೊಂಡಿರುವ ಅವರು, ಆಗಸ್ಟ್ 29ರವರೆಗೆ ಎಲ್ಲ ಸಾರ್ವಜನಿಕ ಕಾರ್ಯಕ್ರಮ
ಮುಂದೂಡಿದ್ದಾರೆ .


kadabatimes.in

ರಾಜ್ಯಪಾಲ
ಥಾವರ್ ಚಂದ್ ಗೆಹ್ಲೋಟ್ ಅವರು ಇಷ್ಟು ದಿನಗಳ ಕಾಲ ಇನೋವಾ ಕಾರಿನಲ್ಲಿ ಓಡಾಡುತ್ತಿದ್ದರು. ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ನಾಯಕರು ನಡೆಸಿದ ಪ್ರತಿಭಟನೆಯಲ್ಲಿ ಅವರ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ಮಾಡಿದ್ದಲ್ಲದೇ, ಬಾಂಗ್ಲಾದೇಶ ಪ್ರಧಾನಿಯಂತೆ ದೇಶ ಬಿಟ್ಟು ಹೋಗಬೇಕಾಗುತ್ತದೆ ಎಂದು ಕೆಲವರು ಹೇಳಿಕೆಗಳನ್ನು ನೀಡಿದ್ದರು.

ಜೊತೆಗೆ
ಕೆಲ ಕಾಂಗ್ರೆಸ್ ನಾಯಕರು ರಾಜ್ಯಪಾಲರಿಗೆ ಎಚ್ಚರಿಕೆಯನ್ನೂ ನೀಡಿದ್ದರು. ಇದರ ಬೆನ್ನಲ್ಲೇ ಕೇಂದ್ರ ಗುಪ್ತಚರ ಇಲಾಖೆಯಿಂದ ರಾಜ್ಯಪಾಲರಿಗೆ Z ಕೆಟಗರಿ ಸೆಕ್ಯೂರಿಟಿ ಒದಗಿಸುವ ಬೆಳವಣಿಗೆ ನಡೆದಿದೆ.

 

kadabatimes.in

ರಾಜ್ಯಪಾಲರ
ವಿರುದ್ಧ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಎಮೆಲ್ಸಿ ಐವನ್ ಡಿಸೋಜಾ
ಅವರು, ಬಾಂಗ್ಲಾದೇಶದ ಹಿಂದಿನ ಪ್ರಧಾನಿಗೆ ಆದ ಗತಿಯೇ ನಿಮಗೂ
ಆಗುತ್ತದೆ. ನೀವು ರಾಜ್ಯ ಬಿಟ್ಟು ಪಲಾಯನ ಮಾಡಬೇಕಾಗುತ್ತದೆ ಎಂದು ಥಾವರ್ಚಂದ್ ಗೆಹ್ಲೋಟ್ ಅವರಿಗೆ ಎಚ್ಚರಿಕೆ ನೀಡಿದ್ದರು.