ಕಡಬ:ಇಲ್ಲಿನ ಎಡಮಂಗಲದ
ಪರ್ಲ ದ.ಕ ಜಿಲ್ಲಾ
ಪಂಚಾಯತ್ ಸರ್ಕಾರಿ
ಹಿರಿಯ ಪ್ರಾಥಮಿಕ ಶಾಲೆಯ ನೂತನ
ವಿವೇಕ ಕೊಠಡಿ ಉದ್ಘಾಟನೆಯು ಸೆ.10 ರಂದು ನಡೆಯಿತು.




ಸುಳ್ಯ
ವಿಧಾನಸಭಾ ಕ್ಷೇತ್ರದ ಶಾಸಕಿ ಕು|
ಭಾಗೀರಥಿ ಮುರುಳ್ಯ ಉದ್ಘಾಟಿಸಿ ಮಾತನಾಡಿ ಹೆತ್ತವರು ಮಕ್ಕಳನ್ನು ಸರ್ಕಾರಿ
ಶಾಲೆಗೆ ಕಳುಹಿಸಿ ಶಾಲೆಯನ್ನು
ಉಳಿಸಿಕೊಳ್ಳುವಲ್ಲಿ ಕಾಳಜಿವಹಿಸಬೇಕೆಂದರು.
![]() ![]() |
ಶಾಸಕಿ ಕು| ಭಾಗೀರಥಿ ಮುರುಳ್ಯಅವರುನೂತನ ವಿವೇಕ ಕೊಠಡಿ ಉದ್ಘಾಟಿಸುತ್ತಿರುವುದು |
ಎಡಮಂಗಲ
ಗ್ರಾ.ಪಂ ಅಧ್ಯಕ್ಷ
ರಾಮಣ್ಣ ಜಾಲ್ತಾರು ಅಧ್ಯಕ್ಷತೆ ವಹಿಸಿದರು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಪ್ರತೀಶ್
ಬಳಕ್ಕಬೆ ಉಪಾಧ್ಯಕ್ಷೆ ಭಾರತಿ
ಮರೋಳಿ, ಎಡಮಂಗಲ
ಪ್ರೌಢ ಶಾಲಾ ಮುಖ್ಯ ಶಿಕ್ಷಕ ಅಬ್ದುಲ್ ಖಾದರ್, ಹಳೆ
ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಗದೀಶ್
ಪರ್ಲ, ಶಾಲಾಭಿವೃದ್ದಿ ಸಮಿತಿ ನಿಕಟಪೂರ್ವ ಅಧ್ಯಕ್ಷ ಪ್ರವೀಣ್ ಪರ್ಲ, ಗ್ರಾ.ಪಂ ಸದಸ್ಯರಾದ
ನಾಗೇಶ್ ಮರೋಳಿ, ಗೀತಾ ರೈ, ವನಿತಾ, ಹಾಗೂ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಶಾಲಾ
ಮುಖ್ಯ ಶಿಕ್ಷಕಿ ಗೀತಾ. ಜಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ
ಸಮೂಹ
ಸಂಪನ್ಮೂಲ ವ್ಯಕ್ತಿ
ಜಯಂತ್ ಕೆ ಮಾತನಾಡಿದರು ಪ್ರಸ್ತಾವ ನುಡಿದರು, ಸಹ ಶಿಕ್ಷಕಿ
ಸ್ವಾತಿ ಧನ್ಯವಾದ ಅರ್ಪಿಸಿದರು , ಶಿವಪ್ರಸಾದ್ ನೂಚಿಲ ನಿರೂಪಿಸಿದರು. ಶಾಲಾ
ಮಕ್ಕಳು ಪ್ರಾರ್ಥನೆ ಮಾಡಿದರು.ಕಾರ್ಯಕ್ರಮದಲ್ಲಿ ಶಾಲಾ ಹಳೆ ವಿದ್ಯಾರ್ಥಿಗಳು, ಊರವರು, ಪೋಷಕರು ಉಪಸ್ಥಿತರಿದ್ದರು.
Short news in English: Kadaba: The inauguration of the new Viveka Koum of Parla D.K Zilla Panchayat Government Senior Primary School of Edamangala was held on September 10.


MLA of Sullia Assembly Constituency Bhagirathi Murulya inaugurated and said that parents should be concerned about maintaining the school by sending their children to government schools. Ramanna Jaltaru, president of Edamangala Village panachayath , presided over.