ರಾಜ್ಯಾದ್ಯಂತ
ಸೆ.12ರಂದು ತೆರೆ ಕಾಣಲಿರುವ ಬಹುನಿರೀಕ್ಷಿತ ಕನ್ನಡ ಚಲನಚಿತ್ರ ರಾನಿ ಇದರ ನಾಯಕ ನಟ, ಕನ್ನಡತಿ ಧಾರಾವಾಹಿಯ
ನಟ ಕಿರಣರಾಜ್ ಸೆ.10ರಂದು ರಾತ್ರಿ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದು, ಕಾರ್ಯಕಾರಿ ನಿರ್ಮಾಪಕ
ಗಿರೀಶ್ ಹೆಗ್ಡೆ ಅಪಾಯದಿಂದ ಪಾರಾಗಿದ್ದಾರೆ.




ಬೆಳ್ತಂಗಡಿಯ
ವೇಣೂರಿನ ಕರಿಮಣೇಲು ಮೂಲದ ಉದ್ಯಮಿ ಉಮೇಶ್ ಹೆಗ್ಡೆ ಚಲಾಯಿಸುತ್ತಿದ್ದ ಬೆಂಝ್ ಕಾರು ಬೆಂಗಳೂರಿನ ನಾಗರಬಾವಿಯಲ್ಲಿ ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿಯಾಗಿತ್ತು.


ಕಾರಿನಲ್ಲಿದ್ದ
ನಟ ಕಿರಣ್ರಾಜ್ ಎದೆಗೆ ಮುಂದಿನ ಸೀಟ್ ಗುದ್ದಿ ಉಸಿರಾಟಕ್ಕೆ ಸಮಸ್ಯೆಯಾಗಿ ಗಂಭೀರ ಸ್ಥಿತಿಯಲ್ಲಿದ್ದರು. ಅವರನ್ನು ಕೂಡಲೇ ಸಮೀಪದ ಬೆಂಗಳೂರು ಹಾಸ್ಪಿಟಲ್ ಕೆಂಗೇರಿ ಆಸ್ಪತ್ರೆಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ದಾಖಲಿಸಲಾಗಿತ್ತು.
ತೀವ್ರ
ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಇದೀಗ ಚೇತರಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.ಗಿರೀಶ್ ಹೆಗ್ಡೆಯವರು ಸೀಟ್ ಬೆಲ್ಟ್ ಹಾಕಿದ್ದ ಅಪಾಯದಿಂದ ಪಾರಾಗಿದ್ದಾರೆ. ಮುದ್ದರಾಯನ ಪಾಳ್ಯ ವೃದ್ಧಾಶ್ರಮಕ್ಕೆ ಹೋಗಿ ವಾಪಸ್ ಬರುತ್ತಿರುವಾಗ ಅಪಘಾತ ನಡೆದಿದೆ.

