32.4 C
Kadaba
Monday, March 17, 2025

ಹೊಸ ಸುದ್ದಿಗಳು

ಪ್ರಚೋದನಕಾರಿ ಹೇಳಿಕೆ ನೀಡಿದ್ದ SDPI ಮುಖಂಡನ ವಿರುದ್ಧ ಎಫ್​ಐಆರ್​ ದಾಖಲು

Must read

 ಕಡಬ ಟೈಮ್ಸ್,  ಪ್ರಚೋದನಕಾರಿ
ಭಾಷಣ ಮಾಡಿದ್ದ ಎಸ್ಡಿಪಿಐ (SDPI) ಜಿಲ್ಲಾ ಕಾರ್ಯದರ್ಶಿ ಇಮ್ರಾನ್ ಸೇರಿದಂತೆ ಮೂವರ ವಿರುದ್ಧ ಕಾರಟಗಿ ಪೊಲೀಸ್ಠಾಣೆಯಲ್ಲಿ ಎಫ್ಐಆರ್ದಾಖಲಾಗಿದೆ.

kadabatimes.in

ಕೇಂದ್ರ
ಸರ್ಕಾರ ಜಾರಿಗೆ ತರಲು ನಿರ್ಧರಿಸಿರುವ ವಕ್ಫ್ಬಿಲ್​-2024 ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಸೆ​ 13ರಂದು ಕಾರಟಗಿ ಪಟ್ಟಣದಲ್ಲಿ ಮುಸ್ಲಿಮರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯಲ್ಲಿ ಭಾಷಣ
ಮಾಡಿದ್ದ ಎಸ್ಡಿಪಿಐ ಜಿಲ್ಲಾ ಕಾರ್ಯದರ್ಶಿ ಇಮ್ರಾನ್  ಪ್ರಚೋದನಕಾರಿ
ಮಾತುಗಳನ್ನು ಆಡಿದ್ದರು.  

kadabatimes.in

kadabatimes.in

ವಕ್ಫ್​​
ತಂಟೆಗೆ ಬಂದರೆ ನಿಮ್ಮನ್ನು ಮುಸ್ಲಿಂ ಸಮಾಜ ಮುಗಿಸುತ್ತೆ. ನೀವು ಯಾವ ಸಂತತಿಯಿಂದ ಬಂದಿದ್ದಿರೋ, ಯಾವ ದೇಶದಿಂದ ಬಂದಿದ್ದೀರೋ ಗೊತ್ತಿಲ್ಲ. ಆದರೆ, ನಿಮ್ಮ ಸಂತತಿಯನ್ನು ಮುಗಿಸಲಿಕ್ಕೆ ಮುಸ್ಲಿಂ ಸಮಾಜ ಇರುವುದು ಎನ್ನುವ ಸಂದೇಶ ಬಿಜೆಪಿಯವರಿಗೆ ನೀಡುತ್ತೇವೆ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ಸಾವರ್ಕರ ಸಂತತಿಯವರು ಬಂದರೂ ಕೂಡ ಮುಸ್ಲಿಮರ ಆಸ್ತಿಯನ್ನು ಮುಟ್ಟಲಿಕ್ಕೆ ಆಗಲ್ಲ. ನೀವು ಯಾವ ಸಂತತಿಯಿಂದ ಬಂದಿದ್ದೀರೋ ಸಂತತಿಗಳನ್ನು ಮುಗಿಸಲಿಕ್ಕೆ
ಮುಸ್ಲಿಂ ಸಮುದಾಯ ಇರುವುದು. ಸ್ಪಷ್ಟ ಸಂದೇಶವನ್ನು
ಬಿಜೆಪಿ ಮತ್ತು ಆರ್ಎಸ್ಎಸ್ಗೆ ನೀಡಲಿಕ್ಕೆ ಇಷ್ಟಪಡುತ್ತೇನೆ
ಎಂದು ಹೇಳಿದ್ದರು.

kadabatimes.in

ಎಸ್ಡಿಪಿಐ ಮುಖಂಡನ ಪ್ರಚೋಧನಕಾರಿ ಭಾಷಣಕ್ಕೆ ಸಂಬಂಧಿಸಿದಂತೆ ಆತನ ವಿರುದ್ಧ ಬಿಜೆಪಿ ಕಾರಟಗಿ ಪೊಲೀಸ್ಠಾಣೆಯಲ್ಲಿ ದೂರು ದಾಖಲಿಸಿದೆ. ಕಾರಟಗಿ ಮಂಡಲದ ಬಿಜೆಪಿ ಅಧ್ಯಕ್ಷ ಮಂಜುನಾಥ್ಮಸ್ಕಿಯವರು ಇಮ್ರಾನ್ಮತ್ತು ಸಂಘಟಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

You cannot copy content of this page