32.4 C
Kadaba
Monday, March 17, 2025

ಹೊಸ ಸುದ್ದಿಗಳು

ಕಡಬ:ಹಲಸಿನ ಮರದ ಕೊಂಬೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ

Must read

 ಕಡಬ:ಮಾನಸಿಕ ಖಿನ್ನತೆಗೆ ಒಳಗಾಗಿ ವ್ಯಕ್ತಿಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂತೂರು ಗ್ರಾಮದಲ್ಲಿ ನಡೆದಿದೆ.

kadabatimes.in


kadabatimes.in

ಪೆರಾಬೆ ಗ್ರಾ.ಪಂ ನ  ಕುಂತೂರು ಗ್ರಾಮದ ಬಾಚಡ್ಕ ನಿವಾಸಿ ಅಣ್ಣಿ ಗೌಡ (70.) ಆತ್ಮಹತ್ಯೆ ಮಾಡಿಕೊಂಡವರು.


kadabatimes.in

ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಅಣ್ಣಿ ಗೌಡ ಅವರು ಸೆ.16ರಂದು ಮಧ್ಯಾಹ್ನ ಮನೆ ಸಮೀಪದ ಹಲಸಿನ ಮರದ ಕೊಂಬೆಗೆ ನೇಣು ಬಿಗಿದುಕೊಂಡಿದ್ದರು. ಇದನ್ನು ಗಮನಿಸಿ
ಮನೆ ಮಂದಿ
ಹಗ್ಗವನ್ನು ತುಂಡು ಮಾಡಿ ಚಿಕಿತ್ಸೆಗಾಗಿ ಕಡಬ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.


kadabatimes.in

ಅಮಲು ಪದಾರ್ಥ ಸೇವಿಸುವ ಚಟದಿಂದ ಬೇಸತ್ತು ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ
ಮೃತರ
 ಪುತ್ರ ಗಣೇಶ ಅವರು ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You cannot copy content of this page