28.9 C
Kadaba
Tuesday, March 18, 2025

ಹೊಸ ಸುದ್ದಿಗಳು

ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿ: ಗಾಡ್ರೇಜ್ ಲಾಕರ್ ನಲ್ಲಿಟ್ಟಿದ್ದ ಚಿನ್ನಾಭರಣ ಕಳ್ಳತನ

Must read

 ಸುಬ್ರಹ್ಮಣ್ಯ
:
ಇಲ್ಲಿನ ಏನೆಕಲ್ಲು ಗ್ರಾಮದಲ್ಲಿ ಗಾಡ್ರೇಜ್ ಲಾಕರ್ ನಲ್ಲಿಟ್ಟಿದ್ದ ಚಿನ್ನಾಭರಣ ಕಳ್ಳತನವಾಗಿದ್ದು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

kadabatimes.in


kadabatimes.in

ಏನೆಕಲ್ಲು
ನಿವಾಸಿ ಹರೀಶ್ ಪಿ. (60 .) ರವರ ಪತ್ನಿ ವೇದಾವತಿಯವರ ಮನೆಯಲ್ಲಿ ಕೃತ್ಯ ನಡೆದಿದೆ.


kadabatimes.in

ಜೂ.6ರಂದು ಮಧ್ಯಾಹ್ನ ಸುಮಾರು 84 ಗ್ರಾಂ ಚಿನ್ನಾಭರಣಗಳನ್ನು ಶುಚಿಗೊಳಿಸಿ, ಮನೆಯೊಳಗಿನ ಗಾಡ್ರೇಜ್ ಲಾಕರ್ ನಲ್ಲಿ ಇರಿಸಿರುತ್ತಾರೆ. ಸೆ. 17ರಂದು ಸಾಯಂಕಾಲ ಹರೀಶ್ರವರು ಪತ್ನಿಯ ಗಾಡ್ರೇಜ್ ತೆರೆದು ನೋಡಿದಾಗ ಗಾಡ್ರೇಜ್ ಲಾಕರ್ನಲ್ಲಿ ಇರಿಸಿದ್ದ ಚಿನ್ನಾಭರಣಗಳು ಕಾಣೆಯಾಗಿದ್ದು, ಚಿನ್ನಾಭರಣಗಳ ಅಂದಾಜು ಮೌಲ್ಯ 5,00,000/- ಆಗಿರುತ್ತದೆ.


kadabatimes.in

ಜೂ.
6ರಿಂದ ಸೆ. 17 ಮಧ್ಯದ ಅವಧಿಯಲ್ಲಿ
ಯಾರೋ ಕಳ್ಳರು ಮನೆಗೆ ನುಗ್ಗಿ ಮನೆಯ ಒಳಗಿನ ಗಾಡ್ರೇಜ್ ಲಾಕರ್ನಲ್ಲಿ ಇರಿಸಿದ್ದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬುದಾಗಿ ಹರೀಶ್ ರವರು ನೀಡಿದ ದೂರಿನ ಮೇರೆಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ .ಕ್ರ ನಂಬ್ರ:
45/2024 ಕಲಂ:305BNS ರಂತೆ ಪ್ರಕರಣ ದಾಖಲಾಗಿರುತ್ತದೆ.

You cannot copy content of this page