28.9 C
Kadaba
Tuesday, March 18, 2025

ಹೊಸ ಸುದ್ದಿಗಳು

ಕಡಬ: ಹವ್ಯಾಸಿ ಗಾಯಕ ಹೃದಯಾಘಾತದಿಂದ ನಿಧನ:ಹಲವರಿಂದ ಸಂತಾಪ ಸೂಚನೆ

Must read

 ಕಡಬ:
ಹವ್ಯಾಸಿ ಗಾಯಕರಾಗಿ ಚಿರಪರಿಚಿತರಾಗಿದ್ದ ಕುಟ್ರುಪ್ಪಾಡಿ ಗ್ರಾಮದ ಬಾಬು ಸಂಪಡ್ಕ ಅವರು ಹೃದಯಾಘಾತದಿಂದ
ಬುಧವಾರ ನಿಧನರಾಗಿದ್ದಾರೆ.

kadabatimes.in


kadabatimes.in

ಕಡಬದ
 ಬಿಎಸ್ ಎನ್ ಎಲ್ ಸಂಸ್ಥೆಯಲ್ಲಿ ತಾತ್ಕಾಲಿಕ ನೆಲೆಯಲ್ಲಿ
ಹಲವು ಸಮಯದಿಂದ ಸಹಾಯಕರಾಗಿ ಕೆಲಸ ನಿರ್ವಹಿಸಿ ಎಲ್ಲರಿಗೂ ಪರಿಚಿತರಾಗಿದ್ದರು . ಬಳಿಕ ಆಟೋ ಚಾಲಕರಾಗಿ
ದುಡಿಯುತ್ತಿದ್ದರು.


kadabatimes.in

ಸಾಮಾಜಿಕವಾಗಿ
ಗುರುತಿಸಿಕೊಂಡಿದ್ದ ಬಾಬು ಸಂಪಡ್ಕ ಅವರು ಹಲವಾರು ಕಡೆಗಳಲ್ಲಿ ಗಾಯನ,ಭಜನೆ,ನೃತ್ಯ,  ತಬಲಾವಾದಕನದ ಮೂಲಕ ಜನರ ಪ್ರೀತಿ ಗಳಿಸಿದ್ದರು.


ಕೆಲ
ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದರು.ಇದೀಗ ಹೃದಯಾಘಾತದಿಂದ
ನಿಧನರಾಗಿರುವುದಾಗಿ ಕುಟುಂಬ ಮೂಲಗಳಿಂದ ಮಾಹಿತಿ ಲಭಿಸಿದೆ.

kadabatimes.in

ಬಾಬು ಸಂಪಡ್ಕ ಅವರ ನಿಧನ ವಾರ್ತೆ ತಿಳಿದು ರಾಜಕೀಯ ಮುಖಂಡರು, ದಲಿತಪರ ಸಂಘಟನೆಗಳ ಮುಖಂಡರು ಸಂತಾಪ ಸೂಚಿಸಿದ್ದಾರೆ. 

You cannot copy content of this page