ಕಡಬ:
ಇಲ್ಲಿನ ರೆಂಜಿಲಾಡಿಯ ಸ್ಯಾಂತೋಮ್ ವಿದ್ಯಾನಿಕೇತನ್
ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾರತ ಸ್ಕೌಟ್ಸ್ ಗೈಡ್ಸ್ ಉದ್ಘಾಟನಾ ಕಾರ್ಯಕ್ರಮವು ಸೆ.21( ಶನಿವಾರ) ನಡೆಯಿತು.




ಮುಖ್ಯ
ಅತಿಥಿಯಾಗಿ ಆಗಮಿಸಿದ ಭಾರತ ಮತ್ತು ಗೈಡ್ಸ್ ಕರ್ನಾಟಕ ಇದರ ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ್ ರಾಜ್ ಕೆ ಉದ್ಘಾಟಿಸಿದರು. ಬಳಿಕ
ಮಾತನಾಡಿ, ಸಾಧನೆ ಅನ್ನುವ ಬೀಜ ಯಾರ ಬಳಿಯಾದರೂ ಮೊಳಕೆ ಒಡೆಯಲು ಸಾಧ್ಯ ಶ್ರಮ ಪಟ್ಟರೆ ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲ ಎಂದರು.


ಶಾಲಾ ಸಂಚಾಲಕ ರೆ.ಫಾ. ಪೌಲ್ ಜೇಕಬ್, ಆಡಳಿತ
ಮಂಡಳಿಯ ಕೋಶಾಧಿಕಾರಿ ಸೈಮನ್
ಕೆ ಸಿ ,ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜ್ಯೋತಿ ಯೆಸ್.ಕೆ , ಗೈಡ್ ಶಿಕ್ಷಕಿ ಶ್ರೀಮತಿ ಪ್ರಿಯಾ.ಏ ,ಸ್ಕೌಟ್ ಮಾಸ್ಟರ್
ವಿಶ್ವತ್ ಪಿ ವೇದಿಕೆಯಲ್ಲಿದ್ದರು.


ಸಹ
ಶಿಕ್ಷಕಿ ,ಕು| ಅಕ್ಷತಾ ಕೆ ಸ್ವಾಗತಿಸಿ ಸಹ
ಶಿಕ್ಷಕಿ ಶ್ರೀಮತಿ ಸಂಗೀತ ವಂದಿಸಿದರು ,ಸಹ ಶಿಕ್ಷಕಿ ಶ್ರೀಮತಿ
ಪ್ರಭಾವತಿ ನಿರೂಪಿಸಿದರು. ಶಾಲಾ ಶಿಕ್ಷಕರು, ಶಿಕ್ಷಕೇತರ ವರ್ಗ, ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.