39.9 C
Kadaba
Tuesday, March 18, 2025

ಹೊಸ ಸುದ್ದಿಗಳು

ಕಡಬದಲ್ಲಿ ಮರ ವ್ಯಾಪಾರಸ್ಥರ ಸಂಘ ರಚನೆ: ಇದರ ಉದ್ದೇಶವಾದರೂ ಏನು?

Must read

ಕಡಬ ಟೈಮ್ಸ್: ಮರ ವ್ಯಾಪಾರಾಸ್ಥರಿಗೆ ಆಗುವ ತೊಂದರೆ ಹಾಗೂ ಬೇರೆ ರಾಜ್ಯಗಳ ವ್ಯಾಪಾರಿಗಳ ದಬ್ಬಾಳಿಕೆಯನ್ನು ಎದುರಿಸುವ ಸಲುವಾಗಿ ಕಡಬದಲ್ಲಿ ತಾಲೂಕು ಸಂಘ ರಚನೆಗೊಂಡಿದೆ.
ಜಿಎಸ್ಟಿ ಮುಖಾಂತರ ತೆರಿಗೆ ಪಾವತಿ ಮಾಡುತ್ತಿದ್ದರೂ ಮರ ವ್ಯಾಪಾರಿಗಳು ನಷ್ಟ ಅನುಭವಿಸುತ್ತಿದ್ದಾರೆ.ಇದನ್ನು ಸಾಂಘಿಕ ಹೋರಾಟದ ಮೂಲಕ  ಪರಿಹರಿಸುವ ನಿಟ್ಟಿನಲ್ಲಿ ಈ ಸಂಘ ಕೆಲಸ ನಿರ್ವಹಿಸಲಿದೆ.
 ಒಕ್ಕಲಿಗರ ಸಭಾಭವನದಲ್ಲಿ ಕೆ.ಕೆ.ಅಬೂಬಕ್ಕರ್ ಅವರ ಅಧ್ಯಕ್ಷತೆಯಲ್ಲಿ ಸಮಾಲೋಚನೆ ಸಭೆ ನಡೆದು ಬಳಿಕ ಒಮ್ಮತ ಅಭಿಪ್ರಾಯ ಪಡೆದು ತಾಲೂಕು ಮಟ್ಟದ ಮರ ವ್ಯಾಪಾರಸ್ಥರ ಸಮಿತಿ ರಚಿಸಲಾಯಿತು.
ಗೌರವಾಧ್ಯಕ್ಷರಾಗಿ ಅಬ್ದುಲ್ ಖಾದರ್ ಹಾಜಿ ಸುಂಕದಕಟ್ಟೆ, ಅಧ್ಯಕ್ಷರಾಗಿ ಕೆ.ಕೆ.ಅಬೂಬಕ್ಕರ್ ಕೋಲ್ಪೆ, ಉಪಾಧ್ಯಕ್ಷರಾಗಿ ಉಮೇಶ್ ಮಡ್ಯಡ್ಕ,ಇಸ್ಮಾಯಿಲ್ ಕಲಾರ, ಪ್ರದಾನ ಕಾರ್ಯದರ್ಶಿಯಾಗಿ ಇರ್ಷಾದ್ ಕಡಬ, ಜೊತೆ ಕಾರ್ಯದರ್ಶಿಯಾಗಿ ಕೆ.ಇ ಮುಹಮ್ಮದ್ ರಫೀಕ್ ಕೋಲ್ಪೆ, ಶಾಕಿರ್ ತಿಮರಡ್ಡ,ಕೋಶಾಧಿಕಾರಿಯಾಗಿ ಅಸ್ರಫ್ ಮರ್ದಾಳ, ಗೌರವ ಸಲಹೆಗಾರರಾಗಿ ರಝಾಕ್ ಕೋಡಿಂಬಾಡಿ, ಸರ್ಪುದ್ದೀನ್ ಸುಂಕದಕಟ್ಟೆ, ರಝಾಕ್ ನೆಲ್ಯಾಡಿ, ಬಶೀರ್ ಮರ್ದಾಳ, ಅಶ್ರಫ್ ನಾಗಮಾರ್, ಕೆ.ಎಂ ಮುಹಮ್ಮದ್ ಕೋಲ್ಪೆ, ಸಂಘಟನಾ ಕಾರ್ಯದರ್ಶಿಯಾಗಿ ಉಮ್ಮರ್ ಕೊಂತೂರ್, ಮಾದ್ಯಮ ಕಾರ್ಯದರ್ಶಿಯಾಗಿ 
ಜಾಬೀರ್ ಕಲಾರ ಹಾಗೂ ಸದಸ್ಯರಾಗಿ ಅನ್ಸಾರ್ ಕಲಾರ,
ಅಶ್ರಫ್ ತಿಮರಡ್ಡ, ಬಶೀರ್ ಕಡಬ, ಮುಹಮ್ಮದ್ ಅಶ್ರಫ್ ಕಡಬ, ಹನೀಫ್ ಬೆಳಂದೂರು ಹಾರಿಸ್ ತಿಮರಡ್ಡ, ಯಾಕೂಬ್ ಬೆಳಂದೂರು, ಯೂಸುಫ್ ನೆಲ್ಯಾಡಿ, ದಾವೂದ್ ಕಲಾರ ನಾಸಿರ್ ಸವಣೂರು, ಅಶ್ರಫ್ ಕಲಾರ, ಸಮದ್ ಕಡಬ, ಖಾದರ್ ಕಡಬ ಇವರನ್ನು ಆಯ್ಕೆ ಮಾಡಲಾಯಿತು. 

You cannot copy content of this page